ಬೆಂಗಳೂರು: ದೇಶದ ನೃತ್ಯ ಪ್ರಕಾರಗಳಿಗೆ ಗೌರವ ಸಮರ್ಪಿಸುವ ‘ನೃತ್ಯಾಂಜಲಿ’ ಹೆಸರಿನ ಆಭರಣಗಳ ಸಂಗ್ರಹವನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯು ಬಿಡುಗಡೆ ಮಾಡಿದೆ.

‘ನೃತ್ಯಾಂಜಲಿ’ಯು ಸೊಗಸಾದ ಆಭರಣಗಳ ಸಂಗ್ರಹವಾಗಿದ್ದು, ಸಾಂಪ್ರದಾಯಿಕ ಭಾರತೀಯ ನೃತ್ಯ ಪ್ರಕಾರಗಳ ಅಂದವನ್ನು ಶುದ್ಧ ಚಿನ್ನದಲ್ಲಿ ಹಿಡಿದಿರಿಸಿದೆ ಎಂದು ಕಂಪನಿ ಹೇಳಿದೆ. ಪ್ರತಿ ಆಭರಣವನ್ನೂ ಶುದ್ಧ ಚಿನ್ನದಿಂದ ತಯಾರಿಸಲಾಗಿದೆ. ಅಮೂಲ್ಯವಾದ ರತ್ನದ ಹರಳುಗಳಿಂದ ಅವುಗಳ ಸೊಗಸನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಶಾಸ್ತ್ರೀಯ ನೃತ್ಯ ಪ್ರಕಾರಗಳ ವಿವಿಧ ಭಂಗಿಗಳು, ಮುದ್ರೆಗಳನ್ನು ಇವು ಬಿಂಬಿಸುತ್ತವೆ. ಈ ಸಂಗ್ರಹದಲ್ಲಿ ನೆಕ್ಲೇಸ್‍ಗಳು, ಕಿವಿಯೋಲೆಗಳು, ಉಂಗುರಗಳು ಮತ್ತು ಬಳೆಗಳು, ಸಿಗ್ನೇಚರ್ ಮೋಟಿಫ್‍ಗಳು ಇವೆ.

‘ನೃತ್ಯಾಂಜಲಿ ಸಂಗ್ರಹದ ಮೂಲಕ ನಾವು ದೇಶದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಿಗೆ ಗೌರವ ಸಲ್ಲಿಸಲು ಬಯಸುತ್ತೇವೆ’ ಎಂದು ಮಲಬಾರ್ ಗ್ರೂಪ್‍ನ ಅಧ್ಯಕ್ಷರಾದ ಎಂ.ಪಿ. ಅಹಮ್ಮದ್ ಹೇಳಿದ್ದಾರೆ. ಈ ಸಂಗ್ರಹವು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ರಾಜ್ಯದ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಅಭಿಮಾನಿಗಳಿಗಾಗಿ ‘ಕುಟುಂಬದ ಫೋಟೊ‘ ಹಂಚಿಕೊಂಡ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.