ಬೆಂಗಳೂರು: ಬ್ಯಾಂಕ್ ನೌಕರರಿಗೆ ವೇತನದಲ್ಲಿ ಶೇ 17ರಷ್ಟು ಹೆಚ್ಚಳ ಮಾಡಲು ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ) ಒಪ್ಪಿಗೆ ನೀಡಿದೆ.

ಈ ಹೆಚ್ಚಳವು 2022ರ ನವೆಂಬರ್ 1ರಿಂದಲೇ ಅನ್ವಯವಾಗುವಂತೆ ಐದು ವರ್ಷಗಳ ಅವಧಿಗೆ ಇದು ಜಾರಿಯಲ್ಲಿ ಇರಲಿದೆ. ಈ ಸಂಬಂಧ ಗುರುವಾರ ನಡೆದ ಸಭೆಯಲ್ಲಿ ಐಬಿಎ ಮತ್ತು 9 ಸಂಘಟನೆಗಳನ್ನು ಒಳಗೊಂಡಿರುವ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಒಪ್ಪಂದಕ್ಕೆ ಸಹಿ ಮಾಡಿವೆ. ವೇತನ ಹೆಚ್ಚಳದಿಂದ ಎಸ್ಬಿಐ ಒಳಗೊಂಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ₹12,449 ಕೋಟಿಯಷ್ಟು ಹೊರೆ ಆಗಲಿದೆ.

ಬ್ಯಾಂಕ್ಗಳಿಗೆ ಪ್ರತಿ ಶನಿವಾರವೂ ರಜಾ ದಿನವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಐಬಿಎ ತಿಳಿಸಿದೆ. ಇದರಿಂದಾಗಿ ವಾರದಲ್ಲಿ ಐದು ದಿನ ಕೆಲಸದ ಬೇಡಿಕೆಯು ಈಡೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.