ಬೆಂಗಳೂರು: ತಿರುಪತಿಯ ಲಡ್ಡು ಪ್ರಸಾದ ತಯಾರಿಕೆಗೆ ಬಳಸಲು, ತಿರುಮಲ ದೇವಸ್ಥಾನ ಮಂಡಳಿಯು ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) 14 ಲಕ್ಷ ಕೆಜಿಯಷ್ಟು ನಂದಿನಿ ತುಪ್ಪ ಸರಬರಾಜು ಮಾಡಲು ಕೇಳಿಕೊಂಡಿದೆ.

ತುಪ್ಪವನ್ನು ತಕ್ಷಣದಿಂದಲೇ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. 20 ವರ್ಷಗಳಿಂದಲೂ ಲಡ್ಡು ತಯಾರಿಕೆಗೆ ಕೆಎಂಎಫ್ನ ಉತ್ಕೃಷ್ಟ ಗುಣಮಟ್ಟದ ಮತ್ತು ಸುವಾಸಿತ ನಂದಿನಿ ತುಪ್ಪ ಬಳಸಲಾಗುತ್ತಿದೆ ಎಂದು ಕೆಎಂಎಫ್ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಮೃತ್ಯುಂಜಯ. ಟಿ. ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ಎರಡನೆ ಅತಿ ದೊಡ್ಡ ಸಹಕಾರಿ ಹಾಲು ಮಹಾ ಮಂಡಳಿಯಾಗಿರುವ ಕೆಎಂಎಫ್, ಪ್ರತಿದಿನ ರಾಜ್ಯದ ರೈತರಿಂದ 74 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದೆ. ಶೇಖರಿಸಿದ ಹಾಲನ್ನು ‘ನಂದಿನಿ’ ಬ್ರ್ಯಾಂಡ್ ಹೆಸರಿನಡಿ 40 ವರ್ಷಗಳಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಯ ಪೊಟ್ಟಣಗಳಲ್ಲಿ ವಿತರಿಸುತ್ತಿದೆ. ಹಾಲಿನ 20ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.