ನವದೆಹಲಿ: ನ್ಯೂ ಡೆಲ್ಲಿ ಟೆಲಿವಿಷನ್ (ಎನ್ಡಿಟಿವಿ) ಕಂಪನಿಯು ತನ್ನ ಆಡಳಿತ ಮಂಡಳಿಯಲ್ಲಿ ಅದಾನಿ ಸಮೂಹದ ಸಂಸ್ಥೆಗೆ ಎರಡು ಸ್ಥಾನಗಳನ್ನು ನೀಡಲು ಮುಂದಾಗಿದೆ.

ಎನ್ಡಿಟಿವಿಯ ಆಡಳಿತ ಮಂಡಳಿಗೆ ಇಬ್ಬರು ನಿರ್ದೇಶಕರನ್ನು ನಾಮನಿರ್ದೇಶನ ಮಾಡುವಂತೆ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ನ ಅಂಗಸಂಸ್ಥೆ ಆಗಿರುವ ಆರ್ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನು ಆಹ್ವಾನಿಸಲು ಡಿಸೆಂಬರ್ 9ರಂದು ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಇದೇ 23ರಂದು ನಡೆಯಲಿರುವ ನಿರ್ದೇಶಕ ಮಂಡಳಿ ಸಭೆಯಲ್ಲಿ ಆ ನೇಮಕವನ್ನು ಪರಿಗಣಿಸಲಾಗುವುದು ಎಂದು ಅದು ಹೇಳಿದೆ.

ಅದಾನಿ ಸಮೂಹವು ಎನ್ಡಿಟಿವಿಯಲ್ಲಿ ಶೇ 37.44ರಷ್ಟು ಷೇರುಪಾಲು ಹೊಂದಿದೆ. ಕಂಪನಿಯ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಒಟ್ಟು ಶೇ 32.3ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.