ನವದೆಹಲಿ: 2022–23ರಲ್ಲಿ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆಯಾಗಿ ₹ 16.61 ಲಕ್ಷ ಕೋಟಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2021–22ರ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ₹ 14.12 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಈಗ ಸಂಗ್ರಹಿಸಲಾಗಿರುವ ತೆರಿಗೆ ಶೇ 17.63ರಷ್ಟು ಹೆಚ್ಚು.

ಈ ಅವಧಿಯಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹ ₹ 19.68 ಲಕ್ಷ ಕೋಟಿ ಇದ್ದು, 2021–23ಕ್ಕೆ ಹೋಲಿಕೆ ಮಾಡಿದರೆ ಇದು ಶೇ 20.33 ರಷ್ಟು ಹೆಚ್ಚಳ. ಕಳೆದ ವರ್ಷ ಒಟ್ಟು ನೇರ ತೆರಿಗೆ ಸಂಗ್ರಹ ₹ 16.36 ಲಕ್ಷ ಕೋಟಿ ಇತ್ತು.

2022–23ನೆಯ ಸಾಲಿಗೆ ಬಜೆಟ್ ಅಂದಾಜಿನ ಪ್ರಕಾರ ನೇರ ತೆರಿಗೆ ಸಂಗ್ರಹವು ₹ 14.20 ಲಕ್ಷ ಕೋಟಿ ಆಗುವ ನಿರೀಕ್ಷೆ ಇತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಇದು ₹ 16.50 ಲಕ್ಷ ಕೋಟಿ ಆಗಿತ್ತು.

ಒಟ್ಟು ನೇರ ತೆರಿಗೆ ಸಂಗ್ರಹವು ಜನರಿಂದ ಸಂಗ್ರಹಿಸಿದ ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆಯನ್ನು ಒಳಗೊಂಡಿರುತ್ತದೆ. 2022–23ರಲ್ಲಿ ಒಟ್ಟು ₹ 3.07 ಲಕ್ಷ ಕೋಟಿ ಮರುಪಾವತಿ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.