ಕೋಲ್ಕತ್ತ : ಹೊಸ ಸಹಕಾರ ನೀತಿಯು ಬಹುತೇಕ ಸಿದ್ಧವಾಗಿದ್ದು, 47 ಸದಸ್ಯರ ಸಮಿತಿಯು ಕರಡು ನೀತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಸಮಿತಿಯ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ಶನಿವಾರ ತಿಳಿಸಿದ್ದಾರೆ.

ದೇಶದಲ್ಲಿ ಸಹಕಾರ ಚಳವಳಿ ಬಲಪಡಿಸುವ ಉದ್ದೇಶದಿಂದ ನೀತಿಯು ಸಿದ್ಧವಾಗುತ್ತಿದ್ದು, ಪ್ರಭು ಅವರು ರಾಷ್ಟ್ರ ಮಟ್ಟದ ಸಮಿತಿಯ ಮುಖ್ಯಸ್ಥ ಆಗಿರಲಿದ್ದಾರೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಕಳೆದ ವರ್ಷ ಘೋಷಿಸಿದ್ದರು.

ಸಮಿತಿಯು ಕರಡು ನೀತಿಯನ್ನು ಅಂತಿಮಗೊಳಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸುವ ಪ್ರಕ್ರಿಯೆ ಕೈಗೊಂಡಿದೆ. ನೀತಿ ಬಿಡುಗಡೆ ಮಾಡುವ ಮತ್ತು ಅದನ್ನು ಜಾರಿಗೊಳಿಸುವ ಕಡೆಗೆ ನಾವು ಗಮನ ಹರಿಸಬಹುದು ಎಂದು ಸಿಐಐ ಆಯೋಜಿಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ.

ಭಾರತದ ಸಾಮಾಜಿಕ–ಆರ್ಥಿಕ ಆಯಾಮವನ್ನು ಬದಲಿಸುವ ಸಾಮರ್ಥ್ಯವನ್ನು ಈ ನೀತಿಯು ಹೊಂದಿದೆ. ದೇಶದ ಜಿಡಿಪಿಗೆ ಸಹಕಾರ ವಲಯದ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೂಪುಗೊಂಡಿದೆ ಎಂದು ಪ್ರಭು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.