ಮುಂಬೈ: ಅಡುಗೆ ಅನಿಲ ಸಿಲಿಂಡರಗಳ (ಎಲ್ಪಿಜಿ) ವಿತರಕರನ್ನು ನೇಮಕ ಮಾಡಲಾಗುವುದು ಎಂದು ಆಮಿಷ ಒಡ್ಡುವ ನಕಲಿ ಅಂತರ್ಜಾಲ ತಾಣಗಳ ವಂಚನೆಗೆ ಬಲಿಯಾಗಬಾರದು ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿವೆ.

ವಂಚಕರು ಪ್ರಧಾನ ಮಂತ್ರಿ ಉಜ್ವಲ ಯೋಜನಾ ಅಥವಾ ಹಿಂದೆ ಜಾರಿಯಲ್ಲಿದ್ದ ರಾಜೀವ್ ಗಾಂಧಿ ಗ್ರಾಮೀಣ ಎಲ್ಪಿಜಿ ವಿತರಕ ಯೋಜನೆ ಹೆಸರಿನಲ್ಲಿ www.lpgvitarakchayan.org ಸೇರಿದಂತೆ ವಿವಿಧ ಹೆಸರಿನಲ್ಲಿ ನಕಲಿ ಅಂತರ್ಜಾಲ ತಾಣಗಳನ್ನು ಸೃಷ್ಟಿಸಿ ವಂಚನೆ ಎಸಗುತ್ತಿವೆ. ಈ ನಕಲಿ ತಾಣಗಳು ಅಧಿಕೃತ ತಾಣದ ವಿನ್ಯಾಸವನ್ನೇ ಹೋಲುತ್ತವೆ. ನೋಂದಾಯಿತ ಕಚೇರಿ ಮುಂಬೈನಲ್ಲಿ ಇದೆ ಎಂಬ ಮಾಹಿತಿ ಈ ತಾಣಗಳಲ್ಲಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿವೆ.

ಐಒಸಿ, ಎಚ್ಪಿಸಿಎಲ್ ಮತ್ತು ಬಿಪಿಸಿಎಲ್ ಹೆಸರಿನಲ್ಲಿ ನಕಲಿ ಇ–ಮೇಲ್ ವಿಳಾಸದ (info@ujjwaladealer.com) ಮೂಲಕ ಬರುವ ಸುಳ್ಳು ಮಾಹಿತಿಗೆ ಮರುಳಾಗಬೇಡಿ. ವಿತರಕರ ನೇಮಕಾತಿಗಾಗಿ ಹಣ ಪಾವತಿಸಿ ವಂಚನೆಗೆ ಒಳಗಾಗಬಾರದು ಎಂದು ಗ್ರಾಹಕರಲ್ಲಿ ತೈಲ ಮಾರಾಟ ಸಂಸ್ಥೆಗಳು ಮನವಿ ಮಾಡಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.