ಬೆಂಗಳೂರು: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ರಾಜ್ಯದಲ್ಲಿ ತನ್ನ ವಹಿವಾಟಿನ ಬೆಳವಣಿಗೆಗಾಗಿ ಒಂದು ವರ್ಷದಲ್ಲಿ 1,500 ವೃತ್ತಿಪರರನ್ನು ನೇಮಿಸಿಕೊಳ್ಳಲಿದೆ ಎಂದು ಬ್ಯಾಂಕ್‌ನ ರಿಟೇಲ್ ಬ್ರಾಂಚ್ ಬ್ಯಾಂಕಿಂಗ್‌ನ ಮುಖ್ಯಸ್ಥ ಅಹ್ಮದ್ ಜಕಾರಿಯಾ ತಿಳಿಸಿದರು.

ರಾಜ್ಯದಲ್ಲಿ ಬ್ಯಾಂಕ್‌ನ ವಹಿವಾಟು ವಿಸ್ತರಣೆಯ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ರಾಜ್ಯದ ಎರಡು, ಮೂರು ಮತ್ತು ನಾಲ್ಕನೇ ಶ್ರೇಣಿಯ ನಗರಗಳಲ್ಲಿ ವಹಿವಾಟು ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದರು.

ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಸುಲಭವಾಗಿ ಸಿಗುವಂತೆ ಮಾಡಲು ಒಂದು ವರ್ಷದ ಒಳಗಾಗಿ ಒಟ್ಟಾರೆ 100 ಸ್ಮಾರ್ಟ್ ಬ್ಯಾಂಕಿಂಗ್ ಲಾಬಿ ಮತ್ತು ಎಟಿಎಂಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

2023ರ ಮಾರ್ಚ್ ಒಳಗಾಗಿ ಹೊಸದಾಗಿ 125ರಿಂದ 130 ಶಾಖೆಗಳನ್ನು ತೆರೆಯುವ ಯೋಜನೆ ಹೊಂದಲಾಗಿದೆ. ಇದರಿಂದಾಗಿ ರಾಜ್ಯದಲ್ಲಿನ ಒಟ್ಟು ಶಾಖೆಗಳ ಸಂಖ್ಯೆ 450ಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಬ್ಯಾಂಕ್‌ನ ವಹಿವಾಟು ₹ 2 ಲಕ್ಷ ಕೋಟಿ ದಾಟಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಒಟ್ಟಾರೆ ಠೇವಣಿಯು ₹ 1.39 ಲಕ್ಷ ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.