ನವದೆಹಲಿ: ತೈಲ ಮತ್ತು ನೈಸರ್ಗಿ ಅನಿಲ ನಿಗಮವು (ಒಎನ್ಜಿಸಿ) ಎರಡು ಪೆಟ್ರೋಕೆಮಿಕಲ್ ಘಟಕಗಳನ್ನು ಸ್ಥಾಪಿಸಲು ₹ 1 ಲಕ್ಷ ಕೋಟಿ ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ದೇಬ್ ಅಧಿಕಾರಿ ತಿಳಿಸಿದ್ದಾರೆ.

ಕಚ್ಚಾ ತೈಲವನ್ನು ನೇರವಾಗಿ ರಾಸಾಯನಿಕ ಉತ್ಪನ್ನಗಳನ್ನಾಗಿ ಪರಿವರ್ತಿಸಲು ಈ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇಂಧನ ಪರಿವರ್ತನೆ ಹಾದಿಯ ಭಾಗವಾಗಿ ಈ ಹೆಜ್ಜೆ ಇಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಾಂಪ್ರದಾಯಿಕ ಇಂಧನ ಬಳಕೆ ಕಡಿಮೆ ಮಾಡಲು ಜಾಗತಿಕ ಮಟ್ಟದಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೇ ವೇಳೆ ಕಚ್ಚಾ ತೈಲವನ್ನು ಬೇರೆ ರೀತಿಯಲ್ಲಿ ಬಳಸಲು ಇರುವ ಮಾರ್ಗಗಳ ಕಡೆಗೂ ಗಮನ ಹರಿಸಲಾಗುತ್ತಿದೆ. ಈ ಹಾದಿಯಲ್ಲಿ ಒಎನ್ಜಿಸಿ ಈ ಯೋಜನೆ ರೂಪಿಸಿದೆ.

ಕಚ್ಚಾ ತೈಲದಿಂದ ಪೆಟ್ರೋಕೆಮಿಕಲ್ ಮತ್ತು ರಾಸಾಯನಿಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಸೋಪು, ಫೈಬರ್, ಪಾಲಿಥೇನ್ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ತಯಾರಿಕೆಯನ್ನು 2030ರ ವೇಳೆಗೆ ಈಗಿರುವ 42 ಲಕ್ಷ ಟನ್ಗಳಿಂದ 85–90 ಲಕ್ಷ ಟನ್ಗಳವರೆಗೆ ಹೆಚ್ಚಿಸುವ ಯೋಜನೆ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ. 2030ರ ವೇಳೆಗೆ ನವೀಕರಿಸಬಲ್ಲ ಇಂಧನ ತಯಾರಿಕೆಯ ಸಾಮರ್ಥ್ಯವನ್ನು 10 ಗಿಗಾವಾಟ್ಗೆ ಹೆಚ್ಚಿಸುವ ಗುರಿಯನ್ನು ಒಎನ್ಜಿಸಿ ಇಟ್ಟುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.