ಮುಂಬೈ: ಭಾರತದ ಕಂಪನಿಗಳು ವಿದೇಶಿ ಷೇರುಪೇಟೆಗಳಲ್ಲಿ ಇನ್ನು ಮುಂದೆ ನೇರವಾಗಿ ನೋಂದಾಯಿತ ಆಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2020ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ಕೋವಿಡ್ ಪರಿಹಾರ ಪ್ಯಾಕೇಜ್‌ನ ಭಾಗವಾಗಿ, ಕಂಪನಿಗಳು ವಿದೇಶಿ ಬಂಡವಾಳ ಮಾರುಕಟ್ಟೆಗಳಲ್ಲಿ ನೇರವಾಗಿ ನೋಂದಾಯಿತ ಆಗಬಹುದು ಎಂದು ಘೋಷಿಸಿತ್ತು. ಆದರೆ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿರಲಿಲ್ಲ.

ವಿದೇಶಗಳಲ್ಲಿ ನೇರವಾಗಿ ನೋಂದಾಯಿತ ಆಗಲು ಅವಕಾಶ ಕಲ್ಪಿಸಿರುವುದರಿಂದ ಭಾರತದ ಕಂಪನಿಗಳಿಗೆ ವಿದೇಶಿ ಷೇರುಪೇಟೆಗಳ ಮೂಲಕ ಬಂಡವಾಳ ಸಂಗ್ರಹಿಸಲು ಸಾಧ್ಯವಾಗುತ್ತದೆ.

‘ಭಾರತದ ಷೇರುಪೇಟೆಗಳಲ್ಲಿ ನೋಂದಾಯಿತ ಆಗಿರುವ ಹಾಗೂ ನೋಂದಾಯಿತ ಆಗಿಲ್ಲದ ಕಂಪನಿಗಳು ಗುಜರಾತ್‌ನ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದ (ಐಎಫ್‌ಎಸ್‌ಸಿ) ಮೂಲಕ ನೇರವಾಗಿ ನೋಂದಾಯಿತವಾಗಿ ಬಂಡವಾಳ ಸಂಗ್ರಹಿಸುವ ಅವಕಾಶ ಕಲ್ಪಿಸಲು ಕೂಡ ತೀರ್ಮಾನಿಸಲಾಗಿದೆ’ ಎಂದು ನಿರ್ಮಲಾ ಅವರು ತಿಳಿಸಿದ್ದಾರೆ.

ಈ ತೀರ್ಮಾನದಿಂದಾಗಿ ದೇಶದ ಕಂಪನಿಗಳಿಗೆ ಜಾಗತಿಕ ಬಂಡವಾಳ ಮಾರುಕಟ್ಟೆಗಳು ಲಭ್ಯವಾಗುತ್ತವೆ ಎಂದು ಅವರು ಹೇಳಿದ್ದಾರೆ. ಭಾರತದ ಕಂಪನಿಗಳು ವಿದೇಶಿ ಷೇರುಪೇಟೆಗಳಲ್ಲಿ ನೇರವಾಗಿ ನೋಂದಾಯಿತ ಆಗುವುದಕ್ಕೆ ಅಗತ್ಯವಿರುವ ನಿಯಮಗಳನ್ನು ಇನ್ನು ಕೆಲವು ವಾರಗಳಲ್ಲಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಿರುವ ನಿಯಮಗಳ ಅನ್ವಯ, ದೇಶದ ಕಂಪನಿಗಳು ವಿದೇಶಿ ಬಂಡವಾಳ ಮಾರುಕಟ್ಟೆಗಳಿಂದ ಬಂಡವಾಳ ಸಂಗ್ರಹಿಸಲು ಅಮೆರಿಕನ್ ಡೆಪಾಸಿಟರಿ ರಿಸೀಪ್ಟ್ಸ್ (ಎಡಿಆರ್) ಮತ್ತು ಗ್ಲೋಬಲ್ ಡೆಪಾಸಿಟರಿ ರಿಸೀಪ್ಟ್ಸ್‌ನ (ಜಿಡಿಆರ್) ಮೊರೆ ಹೋಗುತ್ತವೆ. ಇನ್ಫೊಸಿಸ್, ವಿಪ್ರೊ ಕೂಡ ಇವುಗಳ ಮೂಲಕ ಬಂಡವಾಳ ಸಂಗ್ರಹಿಸಿವೆ.

ಕೇಂದ್ರದ ಹೊಸ ಕ್ರಮವು 1 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ (₹8,224 ಕೋಟಿ) ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ನವೋದ್ಯಮಗಳಿಗೆ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.