ನವದೆಹಲಿ: ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ಗೆ (ಪಿಪಿಬಿಎಲ್) ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ನಿರ್ಬಂಧದಿಂದಾಗಿ ಶುಕ್ರವಾರವೂ ಪೇಟಿಎಂ ಷೇರುಗಳ ಮೌಲ್ಯ ಕುಸಿದಿದೆ.

ಕಳೆದ ಎರಡು ದಿನಗಳ ಅವಧಿಯಲ್ಲಿ ಷೇರುಗಳ ಮೌಲ್ಯ ಶೇ 20ರಷ್ಟು ಕುಸಿದಿದೆ. ಒಟ್ಟಾರೆ ಕಂಪನಿಯ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹30,931.59 ಕೋಟಿಯಿಂದ ₹17,378 ಕೋಟಿಗೆ ಇಳಿಕೆಯಾಗಿದೆ.

ಇದೇ 29ರ ಬಳಿಕ ಪೇಟಿಎಂ ಬಳಕೆದಾರರ ಪ್ರೀಪೇಯ್ಡ್ ಪೇಮೆಂಟ್, ವ್ಯಾಲೆಟ್, ಫಾಸ್ಟ್ಯಾಗ್ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್ಅಪ್ಗಳನ್ನು ಸ್ವೀಕರಿಸಬಾರದು ಎಂದು ಪಿಪಿಬಿಎಲ್ಗೆ ಆರ್ಬಿಐ ಸೂಚಿಸಿದೆ.

ಆ್ಯಪ್ ಕಾರ್ಯ ನಿರ್ವಹಣೆ: ‘ಪೇಟಿಎಂ ಆ್ಯಪ್ ಕಾರ್ಯ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗಿಲ್ಲ. ಫೆಬ್ರುವರಿ 29ರ ನಂತರವೂ ಎಂದಿನಂತೆ ಕಾರ್ಯ ನಿರ್ವಹಿಸಲಿದೆ’ ಎಂದು ಒನ್97 ಕಮ್ಯುನಿಕೇಷನ್ಸ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

‘ಪ್ರತಿಯೊಂದು ಸವಾಲಿಗೂ ಪರಿಹಾರವಿದೆ. ಪೇಟಿಎಂ ಬಳಕೆದಾರರು ನೀಡಿರುವ ಬೆಂಬಲಕ್ಕೆ ನಾವು ಆಭಾರಿಯಾಗಿದ್ದೇವೆ’ ಎಂದಿದ್ದಾರೆ.

ಷೇರು ಸೂಚ್ಯಂಕಗಳು ಏರಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಇನ್ಫೊಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರಿದ್ದರಿಂದ ಶುಕ್ರವಾರ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 440 ಅಂಶ ಏರಿಕೆಯಾಗಿ 72085ಕ್ಕೆ ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ 1441 ಅಂಶ ಜಿಗಿತ ಕಂಡು 73089 ಅಂಶಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 156 ಅಂಶ ಹೆಚ್ಚಳವಾಗಿ 21853ಕ್ಕೆ ಕೊನೆಗೊಂಡಿತು. ದಿನದ ಆರಂಭಿಕ ವಹಿವಾಟಿನಲ್ಲಿ 429 ಅಂಶ ಏರಿಕೆಯಾಗಿ 22126 ಅಂಶಕ್ಕೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.