ಬೆಂಗಳೂರು: ಬೇಸಿಗೆ ಪ್ರವಾಸಕ್ಕೆ ಮಹಿಳಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಪೇಟಿಎಂ ಆ್ಯಪ್ನಲ್ಲಿ ‘ಬುಕಿಂಗ್ ಫಾರ್ ಫೀಮೇಲ್’ ಎಂಬ ವಿಶಿಷ್ಟ ಸೇವೆಯನ್ನು ಪರಿಚಯಿಸಲಾಗಿದೆ.

ಪ್ರವಾಸಕ್ಕೆ ತೆರಳುವ ಮಹಿಳೆಯರಿಗೆ ಬಸ್ಗಳನ್ನು ಆಯ್ಕೆ ಮಾಡಿಕೊಳ್ಳಲು ಇದು ನೆರವಾಗಲಿದೆ ಎಂದು ಪೇಟಿಎಂ ಕಂಪನಿ ತಿಳಿಸಿದೆ.

ಸೌಲಭ್ಯ ಪಡೆಯುವುದು ಹೇಗೆ?: ಆ್ಯಪ್ನಲ್ಲಿರುವ ಟಿಕೆಟ್ ಬುಕಿಂಗ್ ವಿಭಾಗದಲ್ಲಿ ಮೊದಲಿಗೆ ‘ಬಸ್ ಟಿಕೆಟ್’ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಪ್ರಯಾಣದ ವಿವರ ನಮೂದಿಸಬೇಕು. ನಂತರ ‘ಬುಕಿಂಗ್ ಫಾರ್ ಫೀಮೇಲ್’ ಆಯ್ಕೆ ಮೂಲಕ ಆಸನವನ್ನು ಆಯ್ಕೆ ಮಾಡಿಕೊಂಡು ವಿವರ ನಮೂದಿಸಬೇಕು. ಅಂತಿಮವಾಗಿ ಬಟಲ್ ಒತ್ತಿದ ಬಳಿಕ ಇ–ಟಿಕೆಟ್ ದೊರೆಯಲಿದೆ ಎಂದು ವಿವರಿಸಿದೆ.

ಮಹಿಳೆಯರಿಗೆ ಸುರಕ್ಷತೆ ಹಾಗೂ ಸುಖಕರ ಪ್ರವಾಸಕ್ಕಾಗಿ ಈ ಸೇವೆ ಒದಗಿಸಲಾಗಿದೆ. ಪೇಟಿಎಂ ಈ ಸೇವೆ ಒದಗಿಸಿದ ಪ್ರಥಮ ಆನ್ಲೈನ್ ವೇದಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.