ನವದೆಹಲಿ: ದೇಶದ ಔಷಧ ಉದ್ಯಮವು 2030ರ ವೇಳೆಗೆ ₹16.60 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಫಾರ್ಮಾಸುಟಿಕಲ್ಸ್ ಇಲಾಖೆಯ ಕಾರ್ಯದರ್ಶಿ ಅರುಣೀಶ್ ಚಾವ್ಲಾ ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸದ್ಯ ದೇಶದ ಔಷಧ ಉದ್ಯಮವು ₹4.15 ಲಕ್ಷ ಕೋಟಿ ಮೌಲ್ಯದ್ದಾಗಿದ್ದು, 2030ರ ವೇಳೆಗೆ ₹16.60 ಲಕ್ಷ ಕೋಟಿಗೆ ತಲುಪಬಲ್ಲದು. ಇದನ್ನು ಸಾಧಿಸಲು ದೇಶದಲ್ಲಿ ತಯಾರಿಕೆ ಹೆಚ್ಚಿಸುವ ಮೂಲಕ ಆಮದು ಅವಲಂಬನೆ ಕಡಿಮೆ ಮಾಡುವ ಅಗತ್ಯ ಇದೆ. ಜೊತೆಗೆ ರಫ್ತು ವಹಿವಾಟನ್ನೂ ಹೆಚ್ಚಿಸಬೇಕು ಎಂದು ಅವರು ಸಲಹೆ ತಿಳಿಸಿದ್ದಾರೆ.

20 ರಿಂದ 30 ವರ್ಷಗಳಲ್ಲಿ ಸ್ಮಾರ್ಟ್ ಚಿಕಿತ್ಸಾ ಪದ್ಧತಿ ಬರಲಿದೆ. ನಾವು ಅದಕ್ಕಾಗಿ ಸಿದ್ಧರಾಗಬೇಕಿದೆ. ಕೇಂದ್ರ ಸರ್ಕಾರವು ಉತ್ಪನ್ನ ಆಧಾರಿತ ಉತ್ತೇಜನ ಯೋಜನೆಯನ್ನೂ ಒಳಗೊಂಡು ನೀತಿಯಲ್ಲಿ ಹಲವು ರೀತಿಯ ಉತ್ತೇಜನಗಳನ್ನು ಉದ್ಯಮಕ್ಕೆ ನೀಡುತ್ತಿದೆ ಎಂದು ಹೇಳಿದ್ದಾರೆ.

ತಯಾರಿಕಾ ವಲಯದಲ್ಲಿ ಔಷಧ ಉದ್ಯಮದ ಕೊಡುಗೆಯು ಶೇ 10ರಷ್ಟು ಇದ್ದು, 2030ರ ವೇಳೆಗೆ ಶೇ 20ಕ್ಕೆ ಹೆಚ್ಚಿಸಬೇಕಿದೆ. ಇದಕ್ಕೆ ಉದ್ಯಮವು ವರ್ಷದಿಂದ ವರ್ಷಕ್ಕೆ ಎರಡಂಕಿ ಮಟ್ಟದಲ್ಲಿ ಬೆಳವಣಿಗೆ ಕಾಣುವ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.