ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಒಂದು ಸಾವಿರ ನಗರಗಳಲ್ಲಿ ಚಟುವಟಿಕೆ ಆರಂಭಿಸುವುದಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆ ಪಿರಾಮಲ್ ಕ್ಯಾಪಿಟಲ್ ಆ್ಯಂಡ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಪಿಸಿಎಚ್ಎಫ್ಎಲ್) ತಿಳಿಸಿದೆ. ಇಷ್ಟು ನಗರಗಳ ಪೈಕಿ 500ರಿಂದ 600 ನಗರಗಳಲ್ಲಿ ತನ್ನ ಭೌತಿಕ ಕಚೇರಿಗಳನ್ನು ಆರಂಭಿಸುವುದಾಗಿ ಹೇಳಿದೆ.

ವಹಿವಾಟು ವಿಸ್ತರಣೆಯ ಭಾಗವಾಗಿ ಕಂಪನಿಯು 12 ತಿಂಗಳಲ್ಲಿ 100 ಶಾಖೆಗಳನ್ನು ತೆರೆಯಲಿದೆ. 2021ರ ಸೆಪ್ಟೆಂಬರ್ನಲ್ಲಿ ಪಿಸಿಎಚ್ಎಫ್ಎಲ್ ಕಂಪನಿಯು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ಎಫ್ಎಲ್) ಕಂಪನಿಯ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ರಿಟೇಲ್ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಉದ್ದೇಶವನ್ನು ಕಂಪನಿ ಹೊಂದಿದೆ. ದೀರ್ಘಾವಧಿಯಲ್ಲಿ ತನ್ನ ಒಟ್ಟು ಸಾಲಗಳಲ್ಲಿ ಶೇಕಡ 66ರಷ್ಟು ರಿಟೇಲ್ ಸಾಲ ಆಗಿರುವಂತೆ ಮಾಡುವ ಉದ್ದೇಶ ಇದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ‘ಗೃಹಸಾಲ ಮಾತ್ರವೇ ಅಲ್ಲದೆ, ಸಣ್ಣ ಉದ್ದಿಮೆಗಳಿಗೆ, ಎಂಎಸ್ಎಂಇ ವಲಯದ ಉದ್ದಿಮೆಗಳಿಗೆ ಸಾಲ ವಿತರಣೆ ಮಾಡಲಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಯರಾಮ್ ಶ್ರೀಧರನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.