ಮುಂಬೈ: ರೇಟಿಂಗ್ ಸಂಸ್ಥೆಗಳು ಏನು ಯೋಚಿಸುತ್ತವೆ ಎಂಬುದರ ಬಗ್ಗೆ ಅತಿಯಾಗಿ ಗಮನ ನೀಡುವುದಕ್ಕಿಂತಲೂ ಭಾರತದ ನೀತಿ ನಿರೂಪಕರು ಅರ್ಥವ್ಯವಸ್ಥೆಯನ್ನು ರಕ್ಷಿಸುವತ್ತ ನೋಟ ಹರಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದರು.

‘ಕೋವಿಡ್–19 ಸಾಂಕ್ರಾಮಿಕದ ಬಿಕ್ಕಟ್ಟು ಕೊನೆಗೊಂಡ ನಂತರ ನಾವು ವಿತ್ತೀಯ ಹೊಣೆಗಾರಿಕೆಯ ಹಳಿಗೆ ಮರಳುತ್ತೇವೆ ಎಂಬುದನ್ನು ದೇಶದೊಳಗಿನ ಹಾಗೂ ವಿದೇಶಿ ಹೂಡಿಕೆದಾರರಿಗೆ ಮನವರಿಗೆ ಮಾಡಿಕೊಡಬೇಕು. ಮನವರಿಕೆ ಮಾಡುವ ವಿಚಾರದಲ್ಲಿ ಸರ್ಕಾರವೇ ಹೆಚ್ಚಿನ ಹೊಣೆ ಹೊತ್ತುಕೊಳ್ಳಬೇಕು’ ಎಂದು ಅವರು ಗ್ಲೋಬಲ್ ಮಾರ್ಕೆಟ್ಸ್ ಫೋರಂ ಜೊತೆಗಿನ ಮಾತುಕತೆಯಲ್ಲಿ ಹೇಳಿದರು.

‘ಸರ್ಕಾರ ಮತ್ತು ಆರ್ಬಿಐ ಸಹಕಾರ ನೀಡುತ್ತಿವೆ. ಆದರೆ, ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವುದು ಸರ್ಕಾರದ ಕೈಯಲ್ಲಿ ಇದೆ. ಸಾಲವು ನಿಜವಾಗಿಯೂ ಅಗತ್ಯವಿರುವವರಿಗೆ ತಲುಪುತ್ತಿದೆಯೇ ಎಂಬುದನ್ನು ಆರ್ಬಿಐ ಗಮನಿಸಬೇಕು’ ಎಂದು ಅವರು ಸಲಹೆ ನೀಡಿದರು.

ಈ ಹಂತದಲ್ಲಿ ಭಾರತವು ತನ್ನ ಆರ್ಥಿಕ ಸಾಮರ್ಥ್ಯವನ್ನು ರಕ್ಷಿಸಿಕೊಳ್ಳುವತ್ತ ಗಮನ ನೀಡಬೇಕು. ಹಾಗೆ ಮಾಡಿದರೆ, ಕೊರೊನಾ ವೈರಾಣುವಿನ ಸಮಸ್ಯೆಯನ್ನು ಬಗೆಹರಿಸಿಕೊಂಡ ತಕ್ಷಣ ಇತರ ಚಟುವಟಿಕೆಗಳನ್ನು ಪುನರಾರಂಭಿಸಬಹುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.