ನವದೆಹಲಿ: ಬೈಜುಸ್ ಕಂಪನಿಯ ಸಲಹಾ ಮಂಡಳಿ ಸದಸ್ಯರಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ನ ಮಾಜಿ ಅಧ್ಯಕ್ಷ ರಜನೀಶ್ ಕುಮಾರ್ ಮತ್ತು ಇನ್ಫೊಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್ದಾಸ್ ಪೈ ಮಂಡಳಿಯನ್ನು ತೊರೆಯಲು ನಿರ್ಧರಿಸಿದ್ದಾರೆ.

ಸಂಸ್ಥೆಯ ಸಂಸ್ಥಾಪಕರೊಂದಿಗೆ ಚರ್ಚೆ ನಡೆಸಿದ ನಂತರ ಥಿಂಕ್ ಆ್ಯಂಡ್ ಲರ್ನ್ನ ಸಲಹಾ ಮಂಡಳಿಯ ಸದಸ್ಯತ್ವವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಮತ್ತು ಆಡಳಿತವನ್ನು ಸುಧಾರಿಸಲು ಎಜುಟೆಕ್ ಸಂಸ್ಥೆಗೆ ಮಾರ್ಗದರ್ಶನ ಮತ್ತು ಸಲಹೆ ನೀಡಲು ಥಿಂಕ್ ಆ್ಯಂಡ್ ಲರ್ನ್ 2023ರ ಜುಲೈನಲ್ಲಿ ಸಲಹಾ ಮಂಡಳಿಯನ್ನು ರಚಿಸಿತ್ತು. ರಜನೀಶ್ ಮತ್ತು ಮೋಹನ್ದಾಸ್ ಸದಸ್ಯತ್ವ ನವೀಕರಿಸುತ್ತಿಲ್ಲ. ಇದರಿಂದ ಇದೇ ಜೂನ್ 30ರಂದು ಇವರ ಸದಸ್ಯತ್ವ ಮುಕ್ತಾಯಗೊಳ್ಳಲಿದೆ.

ಕುಮಾರ್ ಮತ್ತು ಪೈ ಜಂಟಿ ಹೇಳಿಕೆಯಲ್ಲಿ, ‘ಸಲಹೆಗಾರರಾಗಿ ಕಂಪನಿಯೊಂದಿಗಿನ ನಮ್ಮ ಒಪ್ಪಂದ ಒಂದು ವರ್ಷದವರೆಗೆ ಇತ್ತು. ಔಪಚಾರಿಕ ಒಪ್ಪಂದ ಮುಗಿದಿದ್ದರೂ, ಸಂಸ್ಥಾಪಕರು ಮತ್ತು ಕಂಪನಿಯು ಯಾವುದೇ ಸಲಹೆಗಾಗಿ ಯಾವಾಗಲೂ ನಮ್ಮನ್ನು ಸಂಪರ್ಕಿಸಬಹುದು. ಸಂಸ್ಥಾಪಕರು ಮತ್ತು ಕಂಪನಿಯು ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇವೆ ಎಂದು ತಿಳಿಸಿದ್ದಾರೆ.

ರಜನೀಶ್ ಕುಮಾರ್ ಮತ್ತು ಮೋಹನ್ ದಾಸ್ ಪೈ ಅವರು ಅಮೂಲ್ಯವಾದ ಬೆಂಬಲ ನೀಡಿದ್ದಾರೆ. ಕೆಲವು ವಿದೇಶಿ ಹೂಡಿಕೆದಾರರಿಂದ ನಡೆಯುತ್ತಿರುವ ದಾವೆಗಳು ನಮ್ಮ ಯೋಜನೆಗಳನ್ನು ವಿಳಂಬಗೊಳಿಸಿವೆ. ಆದರೆ, ಕಂಪನಿಯನ್ನು ಕಷ್ಟದ ಸಮಯದಲ್ಲಿ ಮುನ್ನಡೆಸುವಲ್ಲಿ ಅವರ ಎಲ್ಲಾ ಪ್ರಯತ್ನಗಳನ್ನು ಪ್ರಶಂಸಿಸುತ್ತೇನೆ ಎಂದು ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಬೈಜು ರವೀಂದ್ರನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.