ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರತನ್ ಟಾಟಾ ನಿಧನ: ಟಾಟಾ ಸಮೂಹದ ಭವಿಷ್ಯದ ನಾಯಕರು ಇವರೇ..

Published : 10 ಅಕ್ಟೋಬರ್ 2024, 4:55 IST
Last Updated : 10 ಅಕ್ಟೋಬರ್ 2024, 4:55 IST
ಫಾಲೋ ಮಾಡಿ
Comments

ಮುಂಬೈ: ಉದ್ಯಮಿ ರತನ್‌ ಟಾಟಾ ಅವರು ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಉದ್ಯಮ ಕ್ಷೇತ್ರದ ದಿಗ್ಗಜರು, ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿ, ಗೌರವ ಸಲ್ಲಿಸಿದ್ದಾರೆ.

ರತನ್‌ ಅವರು 1937ರ ಡಿಸೆಂಬರ್ 28ರಂದು ಬಾಂಬೆಯಲ್ಲಿ (ಈಗ ಮುಂಬೈ) ಜನಿಸಿದರು. ತಂದೆ ನವಲ್‌ ಟಾಟಾ ಹಾಗೂ ತಾಯಿ ಸೂನಿ ಅವರು 1948ರಲ್ಲಿ ಬೇರೆಯಾದ ನಂತರ, ರತನ್‌ಜಿ ಟಾಟಾ ಅವರ ಪತ್ನಿ (ನವಲ್‌ ಅವರ ತಾಯಿ) ನವಾಜ್‌ಬಾಯಿ ಸೇಠ್‌ ಬಳಿ ಬೆಳೆದರು.

ರತನ್‌ ಅವರಿಗೆ ಸಹೋದರ ಜಿಮ್ಮಿ ಟಾಟಾ ಮತ್ತು ಮಲ ಸಹೋದರ ನೋಯೆಲ್ ಟಾಟಾ (ನವಲ್‌ ಅವರ ಎರಡನೇ ಪತ್ನಿ ಸಿಮೋನ್‌ ಅವರ ಮಗ) ಇದ್ದಾರೆ.

ಜಿಮ್ಮಿ ಅವರು ಟಾಟಾ ಗ್ರೂಪ್‌ನಲ್ಲಿ ಗಮನಾರ್ಹ ಪ್ರಮಾಣದ ಪಾಲನ್ನು ಹೊಂದಿದ್ದರೂ, ಕುಟುಂಬದ ವ್ಯವಹಾರದಲ್ಲಿ ಅಷ್ಟೇನೂ ಆಸಕ್ತಿ ತೋರಿಲ್ಲ. ಹೀಗಾಗಿ, ಟಾಟಾ ಸಮೂಹವನ್ನು ಮುನ್ನಡೆಸುವ ಹೊಣೆ ನೋಯೆಲ್ ಅವರ ಮಕ್ಕಳ ಮುಂದಿದೆ.

ಈಗಾಗಲೇ ಟಾಟಾ ಸಮೂಹದಲ್ಲಿ ಗುರುತಿಸಿಕೊಂಡಿರುವ ಇವರು, ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುವತ್ತ ಹೆಜ್ಜೆ ಇಟ್ಟಿದ್ದಾರೆ.

ನೋಯೆಲ್ ನವಲ್‌ ಟಾಟಾ ಅವರ ಮಕ್ಕಳಲ್ಲಿ ದೊಡ್ಡವರಾದ ಲೇಹ್‌ ಟಾಟಾ, ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ 'ಐಇ ಬಿಸಿನೆಸ್ ಸ್ಕೂಲ್‌'ನಲ್ಲಿ ಮಾರ್ಕೆಟಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 'ತಾಜ್‌ ಹೋಟೆಲ್ಸ್‌ ರೆಸಾರ್ಟ್ಸ್‌ ಅಂಡ್‌ ಪ್ಯಾಲೆಸ್‌'ನ ಸಹಾಯಕ ಮಾರಾಟ ವ್ಯವಸ್ಥಾಪಕರಾಗಿ 2006ರಲ್ಲಿ ಟಾಟಾ ಸಮೂಹ ಸೇರಿದ ಅವರು, ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ 'ದಿ ಇಂಡಿಯನ್ ಹೋಟೆಲ್ಸ್‌ ಕಂಪನಿ ಲಿಮಿಟೆಡ್' (ಐಎಚ್‌ಸಿಎಲ್‌) ಉಪಾಧ್ಯಕ್ಷರಾಗಿದ್ದಾರೆ.

ಕಿರಿಯ ಪುತ್ರಿ ಮಾಯಾ ಅವರು ಟಾಟಾ ಸಮೂಹದ ಪ್ರಮುಖ ಹಣಕಾಸು ಸೇವಾ ಕಂಪನಿ ಟಾಟಾ ಕ್ಯಾಪಿಟಲ್ಸ್‌ನಲ್ಲಿ ವಿಶ್ಲೇಷಕರಾಗಿ ವೃತ್ತಿ ಆರಂಭಿಸಿದ್ದಾರೆ. ಪುತ್ರ ನೆವಿಲ್ಲೆ, ಟಾಟಾ ಮೂಹದ ರೀಟೆಲ್‌ ವ್ಯವಹಾರದ ಕಂಪನಿ 'ಟ್ರೆಂಟ್‌'ನಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ ಮುತ್ತಜ್ಜ ಸ್ಥಾಪಿಸಿದ್ದ 'ಟಾಟಾ ಗ್ರೂಪ್‌'ನ ಅಧ್ಯಕ್ಷರಾಗಿ 1991ರಲ್ಲಿ ಅಧಿಕಾರ ವಹಿಸಿಕೊಂಡ ರತನ್ ಟಾಟಾ, ಉದ್ಯಮದ ಯಶಸ್ಸಿಗೆ ಅವಿರತ ಸೇವೆ ಸಲ್ಲಿಸಿದ್ದಾರೆ. ಉದ್ಯಮಿಯಾಗಿ ಮಾತ್ರವಲ್ಲದೆ, ಸಮಾಜ ಸೇವೆಗೂ ಹೆಸರಾಗಿದ್ದ ಅವರಿಗೆ, ಭಾರತ ಸರ್ಕಾರ ಅತ್ಯುನ್ನದ ನಾಗರಿಕ ಗೌರವಗಳಾದ 'ಪದ್ಮ ಭೂಷಣ' (2000) ಮತ್ತು 'ಪದ್ಮ ವಿಭೂಷಣ' (2008) ನೀಡಿ ಗೌರವಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT