ನವದೆಹಲಿ: ಡಿಜಿಟಲ್ ಪಾವತಿ ಸೇವೆ ನೀಡುತ್ತಿರುವ ಮೊಬಿಕ್ವಿಕ್ ಬಳಕೆದಾರರ ದತ್ತಾಂಶ ಸೋರಿಕೆ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಆರ್ಬಿಐ ತಕ್ಷಣ ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿದೆ.

ಡಾರ್ಕ್ನೆಟ್ನಲ್ಲಿ ಮೊಬಿಕ್ವಿಕ್ನ 10 ಕೋಟಿಗೂ ಅಧಿಕ ಬಳಕೆದಾರರ ದತ್ತಾಂಶ ಸೋರಿಕೆಯಾಗಿ ಮಾರಾಟಕ್ಕಿದೆ ಎನ್ನುವ ಆರೋಪ ಕೇಳಿಬಂದಿದ್ದು, ಮೊಬಿಕ್ವಿಕ್ ಅದನ್ನು ನಿರಾಕರಿಸಿತ್ತು.

ಆದರೆ ಆರ್ಬಿಐ ಈ ಬಗ್ಗೆ ಮೊಬಿಕ್ವಿಕ್ಗೆ ಸೂಚನೆ ನೀಡಿದ್ದು, ಡಿಜಿಟಲ್ ಪಾವತಿ ಸೇವೆಯಲ್ಲಿ ಲೋಪದೋಷಗಳು ಮತ್ತು ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದಲ್ಲಿ, ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ರಾಯಿಟರ್ಸ್ಗೆ ತಿಳಿಸಿವೆ.

ಸಿಕೋಯ್ ಕ್ಯಾಪಿಟಲ್ ಮತ್ತು ಬಜಾಜ್ ಫೈನಾನ್ಸ್ ಬೆಂಬಲಿತ ಮೊಬಿಕ್ವಿಕ್, ಗ್ರಾಹಕರ ಮಾಹಿತಿ ಸೋರಿಕೆಯನ್ನು ನಿರಾಕರಿಸಿರುವುದಕ್ಕೆ ಜನರಿಂದ ಟೀಕೆಗೆ ಒಳಗಾಗಿದೆ.

ಡಾರ್ಕ್ನೆಟ್ನಲ್ಲಿ 10 ಕೋಟಿಗೂ ಹೆಚ್ಚು ಮೊಬಿಕ್ವಿಕ್ ಬಳಕೆದಾರರ ಡೇಟಾ ಮಾರಾಟ?

ಪ್ರಕರಣ ಕುರಿತು ಮೊಬಿಕ್ವಿಕ್ ನೀಡಿರುವ ಆರಂಭಿಕ ವರದಿಯಿಂದ ಆರ್ಬಿಐ ಸಮಾಧಾನ ಹೊಂದಿಲ್ಲ, ಹೀಗಾಗಿ ತಕ್ಷಣವೇ ಸಮಸ್ಯೆ ಪರಿಹರಿಸಲು ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.