ನವದೆಹಲಿ: 'ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಕೈಗೊಂಡ ಕ್ರಮವನ್ನು ಮರುಪರಿಶೀಲಿಸಲು ಯಾವುದೇ ಅವಕಾಶವಿಲ್ಲ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.

ಜನವರಿ 31ರಂದು ಮಹತ್ವದ ಆದೇಶ ಹೊರಡಿಸಿದ್ದ ಆರ್‌ಬಿಐ, ತನ್ನ ಗ್ರಾಹಕರಿಂದ ವ್ಯಾಲೆಟ್, ಫಾಸ್ಟ್‌ಟ್ಯಾಗ್ ಹಾಗೂ ಇನ್ನಿತರ ಪಾವತಿಗಳಿಗೆ ಸ್ವೀಕರಿಸುವ ಟಾಪ್‌ಅಪ್ ಡೆಪಾಸಿಟ್‌ಗಳನ್ನು ಫೆ. 29ರಿಂದ ಸ್ಥಗಿತಗೊಳಿಸುವಂತೆ ಪೇಟಿಎಂಗೆ ಆದೇಶಿಸಿತ್ತು.

ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದಾಸ್, ‘ಸಮಗ್ರ ಮೌಲ್ಯಮಾಪನದ ನಂತರವೇ ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಆರ್‌ಬಿಐ ಅಗತ್ಯ ಕ್ರಮ ಕೈಗೊಂಡಿದೆ. ಹೀಗಾಗಿ ಈ ವಿಷಯದಲ್ಲಿ ಮರುಪರಿಶೀಲನೆಯ ವಿಷಯ ಉದ್ಭವಿಸದು’ ಎಂದಿದ್ದಾರೆ.

‘ಡಿಜಿಟಲ್ ಹಣಕಾಸು ಕ್ಷೇತ್ರವನ್ನು ಸದಾ ಬೆಂಬಲಿಸುವ ಆರ್‌ಬಿಐ, ಹಲವು ಉತ್ತೇಜನಗಳನ್ನೂ ನೀಡುತ್ತಿದೆ. ಅದರ ನಡುವೆಯೂ ಗ್ರಾಹಕರ ಹಿತ ಕಾಯುವುದು ಮತ್ತು ಸುಭದ್ರ ಆರ್ಥಿಕತೆಯನ್ನು ಖಾತ್ರಿಪಡಿಸುವುದೂ ಆರ್‌ಬಿಐನ ಜವಾಬ್ದಾರಿಗಳಾಗಿವೆ’ ಎಂದು ಹೇಳಿದ್ದಾರೆ.

ಪೇಟಿಎಂ ವಿಷಯದಲ್ಲಿ ‘ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು’ ವಿಷಯ ಕುರಿತ ಉತ್ತರ ರೂಪವನ್ನು ಆರ್‌ಬಿಐ ಶೀಘ್ರದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.
.PAYTM ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ: ಬ್ಯಾಂಕ್ ತಪ್ಪಿಗೆ ಗ್ರಾಹಕರಿಗೆ ಸಮಸ್ಯೆ.Paytm: ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿರ್ಬಂಧ, ಆ್ಯಪ್ ಕಾರ್ಯ ನಿರ್ವಹಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.