ಮುಂಬೈ: ಅಮೆರಿಕದ ಗ್ಲೋಬಲ್ ಫೈನಾನ್ಸ್ ನಿಯತಕಾಲಿಕ ಪ್ರಕಟಿಸಿರುವ 2024ನೇ ಸಾಲಿನ ಜಾಗತಿಕ ಮಟ್ಟದ ಉನ್ನತ ಕೇಂದ್ರ ಬ್ಯಾಂಕರ್ಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು, ಅಗ್ರ ಸ್ಥಾನ ಪಡೆದಿದ್ದಾರೆ.

ಸತತ ಎರಡನೇ ವರ್ಷವೂ ಅವರು ಈ ಸ್ಥಾನ ಕಾಯ್ದುಕೊಂಡಿದ್ದಾರೆ.

ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದ ನಿಯತಕಾಲಿಕದ ಕಾರ್ಯಕ್ರಮದಲ್ಲಿ ದಾಸ್ ಅವರು ‘ಎ’ ಪ್ಲಸ್ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ಆರ್ಬಿಐ ‘ಎಕ್ಸ್’ನಲ್ಲಿ ತಿಳಿಸಿದೆ.

ಚಿಲ್ಲರೆ ಹಣದುಬ್ಬರ ನಿಯಂತ್ರಣ, ಆರ್ಥಿಕ ಬೆಳವಣಿಗೆ ಗುರಿ, ಕರೆನ್ಸಿ ಸ್ಥಿರತೆ ಮತ್ತು ಬಡ್ಡಿದರ ನಿರ್ವಹಣೆಯ ಯಶಸ್ಸನ್ನು ಆಧರಿಸಿ ನಿಯತಕಾಲಿಕವು ‘ಎ’ ನಿಂದ ‘ಎಫ್’ ವರೆಗೆ ಗ್ರೇಡ್ ನೀಡುತ್ತದೆ. ‘ಎ’ ಅತ್ಯುತ್ತಮ ಕಾರ್ಯ ನಿರ್ವಹಣೆಯ ಸೂಚಕವಾದರೆ, ‘ಎಫ್’ ವಿಫಲತೆಯನ್ನು ಸೂಚಿಸುತ್ತದೆ.

ಜಗತ್ತಿನ ಪ್ರಮುಖ ಮೂರು ಕೇಂದ್ರೀಯ ಬ್ಯಾಂಕ್ನ ಗವರ್ನರ್ಗಳ ಪಟ್ಟಿಯಲ್ಲಿ ದಾಸ್ ಪ್ರಥಮ ಸ್ಥಾನ ಪಡೆದಿದ್ದಾರೆ. ಡೆನ್ಮಾರ್ಕ್ನ ಕ್ರಿಶ್ಚಿಯನ್ ಕೆಟೆಲ್ ಥಾಮ್ಸೆನ್ ಮತ್ತು ಸ್ವಿಟ್ಜರ್ಲೆಂಡ್ನ ಥಾಮಸ್ ಜೋರ್ಡಾನ್ ಅವರು ಕೂಡ ‘ಎ’ ಪ್ಲಸ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.