ಮುಂಬೈ: ಮುಂಬರುವ ಫೆಬ್ರವರಿ 29 ರ ನಂತರ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್, ವ್ಯಾಲೆಟ್ ಮತ್ತು ಫಾಸ್ಟ್ಟ್ಯಾಗ್ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ಗೆ ಆರ್ಬಿಐ ನಿರ್ಬಂಧಿಸಿದೆ.

ಈ ಕುರಿತು ಬುಧಾವಾರ ಆದೇಶ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ (PPBL) ವಿರುದ್ಧ ರಿಸರ್ವ್ ಬ್ಯಾಂಕ್ ಸಮಗ್ರ ವ್ಯವಸ್ಥೆಯ ಲೆಕ್ಕಪರಿಶೋಧಕರ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರ ಮೌಲ್ಯಮಾಪನಾ ವರದಿಯನ್ನು ಆದರಿಸಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.

ಠೇವಣಿ, ಕ್ರೆಡಿಟ್ ವ್ಯವಹಾರ ಅಥವಾ ಟಾಪ್ ಅಪ್ಗಳನ್ನು ಯಾವುದೇ ಗ್ರಾಹಕ ಖಾತೆಗಳಿಂದ ಸ್ವೀಕರಿಸುವಂತಿಲ್ಲ. ಜತೆಗೆ ಪ್ರಿಪೇಯ್ಡ್, ವಾಲೆಟ್, ಪಾಸ್ಟ್ಟ್ಯಾಗ್, ಎನ್ಸಿಎಮ್ಸಿ ಕಾರ್ಡ್ಗಳನ್ನೂ ನೀಡುವಂತಿಲ್ಲ. ಇದನ್ನು ಹೊರತುಪಡಿಸಿ ಬಡ್ಡಿ ಹಣ, ಮರುಪಾವತಿಯನ್ನು ಯಾವುದೇ ಸಮಯದಲ್ಲಿ ಮಾಡಬಹುದು ಎಂದು ಹೇಳಿದೆ.

ಉಳಿತಾಯ ಖಾತೆ, ಚಾಲ್ತಿ ಖಾತೆ, ಪ್ರೀಪೇಯ್ಡ್ ಪಾವತಿ, ಫಾಸ್ಟ್ಟ್ಯಾಗ್, ಎನ್ಸಿಎಮ್ಸಿ ಮೂಲಕ ಹಣ ತೆಗೆಯಲು ಯಾವುದೇ ನಿರ್ಬಂಧ ಇರುವುದಿಲ್ಲ. ಗ್ರಾಹಕ ತನ್ನ ಖಾತೆಯಿಂದ ಸಿಗುವಷ್ಟು ಹಣವನ್ನು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.