ಮುಂಬೈ:ರಿಲಯನ್ಸ್ ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಉದ್ಯಮಿ ಅನಿಲ್ ಧೀರೂಭಾಯಿ ಅಂಬಾನಿ ರಾಜೀನಾಮೆ ನೀಡಿದ್ದಾರೆ.

ಅಂಬಾನಿ ಮಾತ್ರವಲ್ಲದೆ, ಛಾಯಾ ವೀರಾನಿ, ರ್‍ಯಾನ್ ಕರಾನಿ, ಮಂಜರಿ ಕೇಕರ್ ಮತ್ತು ಸುರೇಶ್ ರಂಗಾಚಾರ್ ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದುಮುಂಬೈ ಷೇರುಪೇಟೆ (ಬಿಎಸ್‌ಇ) ಅಧಿಸೂಚನೆ ತಿಳಿಸಿದೆ.

ಅಂಬಾನಿ,ಛಾಯಾ ವೀರಾನಿ, ಮಂಜರಿ ಕೇಕರ್ ನ. 15ರಂದು, ರ್‍ಯಾನ್ ಕರಾನಿ ನ. 14ರಂದು ಮತ್ತುಸುರೇಶ್ ರಂಗಾಚಾರ್ ನ. 13ರಂದು ರಾಜೀನಾಮೆ ನೀಡಿದ್ದಾರೆ. ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಅ. 4ರಂದೇ ರಾಜೀನಾಮೆ ನೀಡಿದ್ದರು.

ಮಣಿಕಂಠನ್ ಅವರ ರಾಜೀನಾಮೆ ಮತ್ತು ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಡಿ. ವಿಶ್ವನಾಥ್ ಅವರ ನೇಮಕಾತಿಗೆ ಸಾಲಗಾರರ ಸಮಿತಿಯ (ಸಿಒಸಿ) ಅನುಮೋದನೆ ದೊರೆಯಬೇಕಿದೆ. ಅನುಮೋದನೆ ದೊರೆತ ಬಳಿಕ ಮುಂದಿನ ಪ್ರಕಟಣೆ ಹೊರಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ಕಂಪನಿಯು ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ₹ 30,142 ಕೋಟಿ ನಷ್ಟ ಅನುಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.