ಮುಂಬೈ: ದೀಪಾವಳಿ ವೇಳೆಗೆ ದೇಶದ ನಾಲ್ಕು ನಗರಗಳಲ್ಲಿ ರಿಲಯನ್ಸ್ ಜಿಯೊ 5ಜಿ ಸೇವೆ ಆರಂಭಿಸಲಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಸೋಮವಾರ ತಿಳಿಸಿದ್ದಾರೆ.

ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈ ನಗರಗಳಲ್ಲಿ ದೀಪಾವಳಿ ವೇಳೆಗೆ ರಿಲಯನ್ಸ್ ಜಿಯೊ 5ಜಿ ಸೇವೆ ಆರಂಭಿಸಲಿದೆ. 2023ರ ಡಿಸೆಂಬರ್ ಒಳಗಾಗಿ ಇಡೀ ದೇಶದಲ್ಲಿ 5ಜಿ ಸೇವೆ ಒದಗಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ರಿಲಯನ್ಸ್ ಜಿಯೊದ ಷೇರುದಾರರ 45ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘5ಜಿ ಬಳಸಿಕೊಂಡು ಉತ್ತಮ ಗುಣಮಟ್ಟದ, ಕೈಗೆಟಕುವ ದರದ ಸ್ಥಿರ ಬ್ರಾಡ್ಬ್ರ್ಯಾಂಡ್ ಸೇವೆಗಳ ವೇಗ ವೃದ್ಧಿಸಬಹುದು’ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಮೇಲೆ ಒತ್ತಡವಿದೆ. ಅದರ ಹೊರತಾಗಿಯೂ, ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿಯೂ ಭಾರತ ಸ್ಥಿರ ಬೆಳವಣಿಗೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.