ನವದೆಹಲಿ: ಆಹಾರದ ಬೆಲೆ ಇಳಿಕೆಯಿಂದಾಗಿ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಕನಿಷ್ಠ ಶೇ 5.1ರಷ್ಟಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಸೋಮವಾರ ತಿಳಿಸಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು 2023ರ ಡಿಸೆಂಬರ್‌ನಲ್ಲಿ ಶೇ 5.69 ಮತ್ತು 2024ರ ಜನವರಿಯಲ್ಲಿ ಶೇ 6.52 ಇತ್ತು. ಹಣದುಬ್ಬರವು ಕಳೆದ ವರ್ಷ ಆಗಸ್ಟ್‌ನಲ್ಲಿ ಗರಿಷ್ಟ ಅಂದರೆ ಶೇ 6.83ರಷ್ಟು ದಾಖಲಾಗಿತ್ತು.

ಎನ್‌ಎಸ್‌ಒ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಆಹಾರ ಪದಾರ್ಥಗಳ ದರದ ಹಣದುಬ್ಬರವು 2024ರ ಜನವರಿಯಲ್ಲಿ ಶೇ 8.3ರಷ್ಟಿತ್ತು. ಅದಕ್ಕೂ ಹಿಂದಿನ ತಿಂಗಳಲ್ಲಿ ಶೇ9.53ರಷ್ಟಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.