ಚೆನ್ನೈ: ತಮಿಳುನಾಡಿನ ಶ್ರೀಪೆರಂಬದೂರು ಬಳಿಯ ಸ್ಯಾಮ್ಸಂಗ್ ಕಂಪನಿಯ ಘಟಕದಲ್ಲಿ ಕಳೆದ 37 ದಿನಗಳಿಂದ ನೌಕರರು ನಡೆಸುತ್ತಿದ್ದ ಹೋರಾಟವು ಮಂಗಳವಾರ ಅಂತ್ಯಗೊಂಡಿದೆ.

ಸಂಬಳ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 1,100ಕ್ಕೂ ಹೆಚ್ಚು ನೌಕರರು ಸೆಪ್ಟೆಂಬರ್ 9ರಿಂದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಂಡಿದ್ದರು. ಕೊನೆಗೆ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರವು ಮಧ್ಯಪ್ರವೇಶಿಸಿ ನೌಕರರು ಮತ್ತು ಕಂಪನಿ ಸಮಸ್ಯೆ ಆಲಿಸಿತ್ತು.

‘ರಾಜ್ಯ ಕಾರ್ಮಿಕ ಕಲ್ಯಾಣ ಇಲಾಖೆಯು ಕಂಪನಿಯ ಪ್ರತಿನಿಧಿಗಳು ಮತ್ತು ನೌಕರರ ನಡುವೆ ನಡೆಸಿದ ಸಂಧಾನ ಸಭೆಯು ಯಶಸ್ವಿಯಾಗಿದೆ. ಹೋರಾಟ ಹಿಂಪಡೆದಿರುವ ನೌಕರರು ಕೆಲಸಕ್ಕೆ ಹಾಜರಾಗಲಿದ್ದಾರೆ. ಹೋರಾಟ ನಿರತ ಕಾರ್ಮಿಕರ ಮೇಲೆ ಯಾವುದೇ ಕ್ರಮಕೈಗೊಳ್ಳುವುದಿಲ್ಲವೆಂದು ಕಂಪನಿಯು ಭರವಸೆ ನೀಡಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.