ನವದೆಹಲಿ: ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ರಾಯಭಾರಿಯನ್ನಾಗಿ ಭಾನುವಾರ ನೇಮಿಸಿದೆ.

ಎಸ್ಬಿಐನ ರಾಯಭಾರಿ (ಬ್ರಾಂಡ್ ಅಂಬಾಸಿಡರ್) ಆಗಿ ಧೋನಿ ವಿವಿಧ ಮಾರ್ಕೆಟಿಂಗ್ ಮತ್ತು ಪ್ರಚಾರ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಪಷ್ಟ ಆಲೋಚನೆ ಮತ್ತು ಒತ್ತಡದ ಸಂದರ್ಭದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಧೋನಿ ಅವರ ಸಾಮರ್ಥ್ಯದಿಂದಾಗಿ ದೇಶದಾದ್ಯಂತ ತನ್ನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.

ಎಸ್ಬಿಐನ ಸಂತೃಪ್ತ ಗ್ರಾಹಕರಗಿರುವ ಅವರು ಪರಿಪೂರ್ಣ ರಾಯಭಾರಿಯೂ ಆಗಲಿದ್ದಾರೆ. ಈ ಪಾಲುದಾರಿಕೆಯೊಂದಿಗೆ ನಾವು ವಿಶ್ವಾಸ, ಪ್ರಾಮಾಣಿಕತೆ ಮತ್ತು ಅಚಲ ಬದ್ಧತೆಯ ಮೂಲಕ ಗ್ರಾಹಕರ ಸೇವೆ ಸಲ್ಲಿಸುತ್ತೇವೆ ಎಂದು ಪುನರುಚ್ಚರಿಸುತ್ತೇವೆ ಎಂದು ಎಸ್ಬಿಐನ ಅಧ್ಯಕ್ಷ ದಿನೇಶ್ ಖಾರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.