ನವದೆಹಲಿ: ಬೈಜುಸ್ ಕಂಪನಿ ವಿರುದ್ಧ ದಿವಾಳಿ ಪ್ರಕ್ರಿಯೆಗೆ ತಡೆ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್ಸಿಎಲ್ಎಟಿ) ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.

ಪ್ರಕರಣ ಏನು?:

ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಬೈಜುಸ್ ಕಂಪನಿಯು ₹158 ಕೋಟಿಯನ್ನು ಬಿಸಿಸಿಐಗೆ ಪಾವತಿಸದೆ ಬಾಕಿ ಉಳಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಬಿಸಿಸಿಐ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್ಸಿಎಲ್ಟಿ) ಬೆಂಗಳೂರು ಶಾಖೆಗೆ ಆಗಸ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ಪುರಸ್ಕರಿಸಿದ್ದ ಕಾನೂನು ನ್ಯಾಯಮಂಡಳಿಯು ಕಂಪನಿಯ ಆಸ್ತಿಯನ್ನು ವಶಕ್ಕೆ ಪಡೆದಿತ್ತು. ಇದನ್ನು ಪ್ರಶ್ನಿಸಿ ಬೈಜುಸ್, ಎನ್ಸಿಎಲ್ಎಟಿಯ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ್ದ ಮೇಲ್ಮನವಿ ನ್ಯಾಯಮಂಡಳಿಯು, ಎನ್ಸಿಎಲ್ಟಿ ಆದೇಶಕ್ಕೆ ತಡೆ ನೀಡಿತ್ತು.

ಅಮೆರಿಕ ಮೂಲದ ಸಾಲದಾತ ಸಂಸ್ಥೆ ಗ್ಲಾಸ್ ಟ್ರಸ್ಟ್ ಕಂಪನಿಯು, ಎನ್ಸಿಎಲ್ಎಟಿ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.

‘ಹಣಕಾಸಿನ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಬೈಜುಸ್ ಮತ್ತು ಬಿಸಿಸಿಐ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಒಪ್ಪಿಗೆ ನೀಡುವುದಕ್ಕೂ ಮೊದಲು ನಿಯಮಾವಳಿಗಳನ್ನು ಪಾಲಿಸಿಲ್ಲ. ವೃತ್ತಿಪರರೊಬ್ಬರು (ಐಆರ್ಪಿ) ಅರ್ಜಿ ಹಿಂಪಡೆಯುವ ಬಗ್ಗೆ ನ್ಯಾಯಮಂಡಳಿಯ ಮುಂದೆ ಕೋರಿಕೆ ಸಲ್ಲಿಸಿದ್ದಾರೆ. ಕಾರ್ಪೊರೇಟ್ ಸಾಲಗಾರರು ಅಥವಾ ಇತರೆ ಸಾಲಗಾರರು ಈ ಅರ್ಜಿ ಸಲ್ಲಿಸಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಎನ್ಸಿಎಲ್ಎಟಿಯು ವಿವೇಚನಾತ್ಮಕವಾಗಿ ತನ್ನ ಅಧಿಕಾರ ಬಳಸಿಲ್ಲ ಎಂದು ಹೇಳಿದೆ.

ಕಾರ್ಪೊರೇಟ್ ದಿವಾಳಿ ಗೊತ್ತುವಳಿ ಪ್ರಕ್ರಿಯೆ (ಸಿಐಆರ್ಪಿ) ಸಲ್ಲಿಕೆಯಾದ ವೇಳೆ ಕಂಪನಿಗೆ ಸಾಲ ನೀಡಿದ ಎಲ್ಲರೂ ಮಧ್ಯಸ್ಥಗಾರರಾಗುತ್ತಾರೆ. ಎನ್ಸಿಎಲ್ಎಟಿ ನಿಯಮ 11ರ ಅನ್ವಯ ಅರ್ಜಿ ಹಿಂಪಡೆಯಲು ಒಪ್ಪಿಗೆ ನೀಡುವಾಗಲು ಸಂಬಂಧಪಟ್ಟವರ ಅಭಿಪ್ರಾಯವನ್ನು ಆಲಿಸಬೇಕಿದೆ ಎಂದು ಹೇಳಿದೆ.

ಸಾಲಗಾರರ ಸಮಿತಿಯಲ್ಲಿ ಹಣವನ್ನು ಠೇವಣಿ ಇಡುವಂತೆ ಬಿಸಿಸಿಐಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.