ನವದೆಹಲಿ: ತನ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಗಿರುವ ವಿಜಯ್ ಶೇಖರ್ ಶರ್ಮಾ ಅವರಿಗೆ ಕಂಪನಿಯ ಷೇರನ್ನು ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ‘ಪೇಟಿಎಂ’ ಮಾಲೀಕತ್ವ ಹೊಂದಿರುವ ‘ಒನ್97 ಕಮ್ಯುನಿಕೇಷನ್ಸ್’ ಸಮೂಹಕ್ಕೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನೋಟಿಸ್ ನೀಡಿದೆ.

‘ನೋಟಿಸ್ ನೀಡಿರುವುದು ಹೊಸ ವಿಷಯವೇನಲ್ಲ. ಈ ಸಂಬಂಧ ಈಗಾಗಲೇ ಸೆಬಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಮ್ಮ ವಾರ್ಷಿಕ ವರದಿಯಲ್ಲಿ ಬಹಿರಂಗಪಡಿಸಿದ್ದೇವೆ’ ಎಂದು ಪೇಟಿಎಂ ಹೇಳಿದೆ.

ಉದ್ಯೋಗಿಗಳು ಸಂಸ್ಥೆಯ ಷೇರನ್ನು ಹೊಂದಬಹುದಾದ ಅವಕಾಶದ (ಇಎಸ್‌ಒಪಿ) ಅಡಿಯಲ್ಲಿ 2022ರ ಹಣಕಾಸು ವರ್ಷದಲ್ಲಿ ಶರ್ಮಾ ಅವರಿಗೆ ₹2.1 ಕೋಟಿಯ ಷೇರನ್ನು ನೀಡಿರುವುದಾಗಿ ಪೇಟಿಎಂನ 2024ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶರ್ಮಾ ಅವರಿಗೆ ಇಎಸ್‌ಒಪಿ ನೀಡಿರುವ ಬಗ್ಗೆ ಸೆಬಿಯು ಪೇಟಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.