ನವದೆಹಲಿ: ಲಾಕ್‌ಡೌನ್ ಸಂದರ್ಭದಲ್ಲಿ ಔಷಧಿ, ವೈದ್ಯಕೀಯ ಉಪಕರಣಗಳ ಪೂರೈಕೆಯಲ್ಲಿ ಕೊರತೆ ಎದುರಾಗದಂತೆ ನೋಡಿಕೊಳ್ಳಲು280ಕ್ಕೂ ಅಧಿಕ ವಿಶೇಷ ಆರ್ಥಿಕ ವಲಯದ (ಎಸ್‌ಇಜೆಡ್) ಘಟಕಗಳಲ್ಲಿ ತಯಾರಿಕೆ ಆರಂಭವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ತಯಾರಿಕಾ ಘಟಕಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದರ ಜತೆಗೆ ಮಾರ್ಚ್ 31ರ ಒಳಗಾಗಿ ಸಲ್ಲಿಸಬೇಕಿರುವ ರಿಟರ್ನ್ಸ್ ತರಹದ ನಿಯಮಗಳನ್ನು ಪಾಲಿಸದೇ ಇದ್ದರೂ ದಂಡನಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವಂತೆಯೂ ಎಸ್‌ಇಜೆಡ್ ಅಭಿವೃದ್ಧಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಕೆಲಸ ಮಾಡುವ ಸ್ಥಳದ ಸುರಕ್ಷತೆ, ಸಿಬ್ಬಂದಿ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಗಮನ ನೀಡುವಂತೆ ತಿಳಿಸಲಾಗಿದೆ.

ದೇಶದ ರಫ್ತು ವಹಿವಾಟಿನಲ್ಲಿ ಎಸ್‌ಇಜೆಡ್‌ಗಳ ಕೊಡುಗೆ ಶೇ 18ರಷ್ಟಿದೆ. 2019–20ರಲ್ಲಿ ಈ ವಲಯಗಳ ರಫ್ತು ಮೌಲ್ಯ ₹8.25 ಲಕ್ಷ ಕೋಟಿಗಳಷ್ಟಿದೆ. 1,900ಕ್ಕೂ ಅಧಿಕ ಐ.ಟಿ ಮತ್ತು ಐಟಿಇಎಸ್ ಘಟಕಗಳಲ್ಲಿನ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.