ಬೆಂಗಳೂರು: ಆ್ಯಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಕಾರ್ಪ್ ಅನ್ನು ಖರೀದಿಸಲು ಟಾಟಾ ಸಮೂಹ ಉತ್ಸಾಹ ತೋರಿದೆ ಎಂದು ವರದಿಗಳು ಹೇಳಿವೆ.

ರಾಜ್ಯದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಘಟಕದ ಖರೀದಿಗೆ ಟಾಟಾ ಆಸಕ್ತಿ ತೋರಿದೆ ಎಂದು ‘ದಿ ಎಕನಾಮಿಕ್ಸ್ ಟೈಮ್ಸ್‘ ಹೇಳಿದೆ.

₹4,000 ರಿಂದ ₹5,000 ಕೋಟಿ ಬೆಲೆಬಾಳುವ ಘಟಕ ಇದಾಗಿದ್ದು, ಆ್ಯಪಲ್ ದೇಶದಲ್ಲಿ ಹೊಂದಿರುವ ಮೂರು ಪ್ರಮುಖ ಘಟಕಗಳಲ್ಲಿ ಒಂದಾಗಿದೆ.

ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ, ಆ್ಯಪಲ್ ಉತ್ಪಾದನೆಯ ಫ್ಯಾಕ್ಟರಿಯನ್ನು ಖರೀದಿಸುವುದು ಟಾಟಾ ಗುರಿಯಾಗಿದೆ.

ಅದರ ಜತೆಗೆ, ಜಪಾನ್ ಮತ್ತು ಕೊರಿಯಾದ ಬೃಹತ್ ಎಲೆಕ್ಟ್ರಾನಿಕ್ಸ್ ಉತ್ಪನ್ನ ತಯಾರಿಕೆಯ ಕಂಪನಿಗಳ ಫ್ಯಾಕ್ಟರಿಯತ್ತಲೂ ಟಾಟಾ ಗಮನ ಹರಿಸಿದೆ.

Apple iPhone | ಮೇಡ್ ಇನ್ ಇಂಡಿಯಾ ಐಫೋನ್ಗೆ ಜಾಗತಿಕ ಬೇಡಿಕೆ

ಈಗಾಗಲೇ ದೇಶದಲ್ಲಿ ವಿಸ್ಟ್ರಾನ್, ಫಾಕ್ಸ್ಕಾನ್ ಮತ್ತು ಪೆಗಟ್ರಾನ್ ಕಂಪನಿಗಳು ಆ್ಯಪಲ್ ಐಫೋನ್ ಉತ್ಪಾದಿಸುತ್ತಿವೆ. ಐಪೋನ್ ಎಸ್ಇ, ಐಫೋನ್ 12, ಐಫೋನ್ 13 ಮತ್ತು ಐಫೋನ್ 14 ಮಾದರಿಗಳು ದೇಶದಲ್ಲಿ ತಯಾರಾಗುತ್ತಿವೆ.

iPhone Sales | ದೇಶದಲ್ಲಿ ದಾಖಲೆಯ ಗಳಿಕೆ ಕಂಡ ಆ್ಯಪಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.