ಹಿಂದೂ ಪಂಚಾಂಗದ ಪ್ರಕಾರ ‘ಯುಗಾದಿ’ ವರ್ಷದ ಮೊದಲ ದಿನ ಹೇಗೋ ಹಾಗೆಯೇ, ಆರ್ಥಿಕ ವರ್ಷದ ಮೊದಲ ದಿನ ಎಪ್ರಿಲ್ 1 ಆಗಿರುತ್ತದೆ. ಪ್ರಸಕ್ತ ವರ್ಷದಲ್ಲಿ ಏನೇನು ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಸಮಯೋಚಿತವಾಗಿ ನಿರ್ಣಯಿಸಲು ಇದು ಸೂಕ್ತ ಸಮಯ. ಆರ್ಥಿಕವಾಗಿ ಇನ್ನೂ ಸಬಲರಾಗಬೇಕಾಗಿರುವ ಅಥವಾ ನಿವೃತ್ತಿ ಬದುಕಿನ ಕ್ಷಣಗಳನ್ನು ಕಳೆಯುತ್ತಿರುವ ವರ್ಗಕ್ಕೆ ತಮ್ಮ ಆದಾಯದ ಸಮರ್ಥ ನಿರ್ವಹಣೆ ಹಾಗೂ ಸಮರ್ಪಕವಾದ ತೆರಿಗೆ ಕಡಿತದ ಬಗೆಗಿನ ತಿಳಿವಳಿಕೆಯಿಂದ ಅನಗತ್ಯ ತೆರಿಗೆ ಕಡಿತ ನಿಲ್ಲಿಸಬಹುದು. ಅಂತಹ ನಿರ್ಧಾರಗಳು ಆರ್ಥಿಕ ವರ್ಷದ ಆರಂಭದಲ್ಲಿಯೇ ಕಾರ್ಯಗತಗೊಂಡರೆ ಇನ್ನೂ ಒಳ್ಳೆಯದು.

ಸದ್ಯಕ್ಕೆ ಹೂಡಿಕೆಗೆ ವಿವಿಧ ರೀತಿಯ ಅವಕಾಶಗಳು ಲಭ್ಯ ಇವೆ. ಆದರೂ ನಿವೃತ್ತಿ ಹೊಂದಿದ ಬಹುತೇಕ ವ್ಯಕ್ತಿಗಳು ಹೆಚ್ಚಿನ ಬಡ್ಡಿ ದರದ ಲಾಭ ಪಡೆಯುವುದಕ್ಕೋಸ್ಕರ, ಅದೇ ರೀತಿ ಭವಿಷ್ಯದ ಯೋಜನೆಗಳನ್ನು ಪೂರೈಸುವುದಕ್ಕೋಸ್ಕರ ಯುವ ಜನರೂ ತಮ್ಮ ಆದಾಯದ ಒಂದಿಷ್ಟು ಮೊತ್ತವನ್ನು ಬ್ಯಾಂಕ್‍ಗಳಲ್ಲಿ ಠೇವಣಿ ರೂಪದಲ್ಲಿ ಇರಿಸುತ್ತಾರೆ. ಒಂದು ರೀತಿ ಈ ಮೊತ್ತ ಸುಭದ್ರ. ಆದರೆ, ಇದರ ಮೇಲೆ ಆದಾಯ ತೆರಿಗೆ ಅನ್ವಯವಾಗುತ್ತದೆ.

ಬಡ್ಡಿ ಆದಾಯಕ್ಕೆ ಟಿಡಿಎಸ್ ನಿಯಮಗಳೇನು?
ಆರ್ಥಿಕ ವರ್ಷ 2019-20 ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ನೀವು ಯಾವುದೇ ಬ್ಯಾಂಕ್‌ನಿಂದ ನಿಶ್ಚಿತ ಠೇವಣಿ, ಚಾಲ್ತಿ ಠೇವಣಿ ಅಥವಾ ಯಾವುದೇ ಕಂಪನಿಯ ಠೇವಣಿ ಇತ್ಯಾದಿಗಳ ಮೇಲೆ ಪ್ರತ್ಯೇಕವಾಗಿ ಪಡೆಯುವ ಒಟ್ಟಾರೆ ವಾರ್ಷಿಕ ಬಡ್ಡಿ ₹ 40,000 ಗಳಿಗಿಂತ ಅಧಿಕ ಮೊತ್ತವಾಗಿದ್ದರೆ, ಅದಕ್ಕೆ ಆಯಾ ಬ್ಯಾಂಕ್ ಅಥವಾ ಸಂಸ್ಥೆಯವರು ತೆರಿಗೆ ಕಡಿತಗೊಳಿಸಬೇಕಾಗುತ್ತದೆ.

ಈ ಹಿಂದಿನ ವರ್ಷಗಳಲ್ಲಿದ್ದ ವಿನಾಯ್ತಿ ಮಿತಿಯನ್ನು ₹ 10,000 ದಿಂದ ₹ 40,000 ಕ್ಕೆ ಏರಿಸಲಾಗಿದೆ. ಇದರಿಂದ ಸಣ್ಣ ಹೂಡಿಕೆದಾರರಿಗೆ ಹಾಗೂ ಆರ್ಥಿಕವಾಗಿ ಅಷ್ಟೊಂದು ಸಬಲರಲ್ಲದ ಜನ ವರ್ಗಕ್ಕೆ ತೆರಿಗೆಯ ರೂಪದಲ್ಲಿ ಕಡಿತವಾಗುವ ದೊಡ್ದ ಹೊರೆಯನ್ನು ತಗ್ಗಿಸಿದಂತಾಗಿದೆ.

ಒಂದುವೇಳೆ ಈ ರೀತಿ ಕಡಿತಗೊಳಿಸಿದ ಮೊತ್ತ ವರ್ಷದ ಕೊನೆಗೆ ತೆರಿಗೆ ಲೆಕ್ಕ ಹಾಕುವಾಗ ಅಧಿಕವೆಂದು ಕಂಡುಬಂದರೆ ಪರಿಣತ ತೆರಿಗೆ ಸಲಹೆಗಾರರ ಸಹಾಯ ಪಡೆದು ತಮ್ಮ ಅಲ್ಪ ಆದಾಯವನ್ನೂ ತೆರಿಗೆ ಇಲಾಖೆಗೆ ರಿಟರ್ನ್ಸ್ ಮೂಲಕ ಸಲ್ಲಿಸಿ , ಕಡಿತಗೊಂಡ ಮೊತ್ತವನ್ನು ತೆರಿಗೆ ಇಲಾಖೆಯಿಂದಲೇ ಹಿಂದೆ ಪಡೆಯಬೇಕಾಗುತ್ತದೆ.

ಇದಕ್ಕಾಗಿ ಒಂದಿಷ್ಟು ಸಮಯ ಹಾಗೂ ಅನಗತ್ಯ ವೆಚ್ಚ ಮಾಡಬೇಕಾಗುತ್ತದೆ. ಇಂಥ ವೃಥಾ ಶ್ರಮವನ್ನು ತಗ್ಗಿಸುವ ಉದ್ದೇಶದಿಂದ, ಸರ್ಕಾರವು ಮಧ್ಯಮವರ್ಗದ ಜನರು ಹಣಕಾಸಿನ ಇಕ್ಕಟ್ಟಿನಲ್ಲಿ ಸಿಲುಕಬಾರದೆಂದು ಕಾನೂನಿನಲ್ಲಿ ಕೆಲವೊಂದು ಅನುಕೂಲಕರ ಅಂಶಗಳನ್ನು ಅಳವಡಿಸಿಕೊಂಡಿದೆ.

ಯಾರಿಗೆ ಫಾರಂ 15ಜಿ ಹಾಗೂ 15ಎಚ್
ತೆರಿಗೆದಾರ 60 ವರ್ಷದೊಳಗಿನ ವ್ಯಕ್ತಿಗಳಾಗಿದ್ದು, ಎಲ್ಲ ಮೂಲಗಳಿಂದ ಬರುವ ಒಟ್ಟು ಬಡ್ಡಿ ಆದಾಯವೂ ಸೇರಿ ತಮ್ಮ ಒಟ್ಟು ನಿವ್ವಳ ಆದಾಯ ₹ 2.50 ಲಕ್ಷಗಳಿಗಿಂತ ಕಡಿಮೆ ಇದ್ದು ನಿರೀಕ್ಷಿತ ತೆರಿಗೆ ಶೂನ್ಯವಾಗಿದ್ದರೆ, ಫಾರಂ 15ಜಿ ತುಂಬಿಬಿಟ್ಟು ಬ್ಯಾಂಕ್‌ಗಳಿಗೆ ಕೊಡಬೇಕಾಗುತ್ತದೆ. ಈ ಸ್ವಯಂ ಘೋಷಿತ ದಾಖಲೆಯ ಆಧಾರದ ಮೇಲೆ ಬ್ಯಾಂಕ್‍ಗಳು ತೆರಿಗೆ ಕಡಿತಗೊಳಿಸುವ ಅಗತ್ಯವಿರುವುದಿಲ್ಲ.

ಅದೇ ರೀತಿ ತೆರಿಗೆದಾರ 60 ವರ್ಷ ಮೀರಿದ ವ್ಯಕ್ತಿಯಾಗಿದ್ದರೆ, ಬಡ್ಡಿ ಆದಾಯವೂ ಸೇರಿ ಎಲ್ಲ ಮೂಲಗಳಿಂದ ಬರುವ ಒಟ್ಟು ಆದಾಯ ₹ 3 ಲಕ್ಷಕ್ಕಿಂತ ಕಡಿಮೆ ಇದ್ದಾಗ ಅಥವಾ 80 ವರ್ಷ ಮೇಲ್ಪಟ್ಟ ವ್ಯಕ್ತಿಯಾಗಿದ್ದರೆ ಬರುವ ಒಟ್ಟು ನಿವ್ವಳ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಾಗಿದ್ದರೆ, ಫಾರಂ 15ಎಚ್ ಅನ್ನು ಭರ್ತಿಮಾಡಿ ಬ್ಯಾಂಕ್‌ಗಳಿಗೆ ಕೊಡಬೇಕಾಗುತ್ತದೆ.

ಒಂದು ವೇಳೆ ಈ ಮೇಲಿನ ಯಾವುದೇ ಸನ್ನಿವೇಶಗಳಲ್ಲಿ ಪ್ರತಿ ಬ್ಯಾಂಕ್‌ನಿಂದ ತೆರಿಗೆದಾರ ಪಡೆಯುವ ಮೊತ್ತ ₹ 40,000 ಕ್ಕಿಂತ ಅಧಿಕವಾಗಿದ್ದು ಸಂಬಂಧಿಸಿದ ಯಾವುದೇ ಫಾರಂ ಅನ್ನು ಬ್ಯಾಂಕಿಗೆ ಭರ್ತಿ ಮಾಡಿ ಕೊಡದಿದ್ದಲ್ಲಿ, ಸಿಗುವ ಬಡ್ಡಿಯ ಶೇಕಡಾ 10 ರಷ್ಟು ಮೊತ್ತವನ್ನು ಬ್ಯಾಂಕ್ ಕಡಿತಗೊಳಿಸಬೇಕಾಗುತ್ತದೆ.

ಈ ಉದ್ದೇಶದಿಂದ, ನಿಗದಿತ ಫಾರಂಗಳನ್ನು ಏಪ್ರಿಲ್ ತಿಂಗಳ ಕೊನೆಯೊಳಗೆ ಅಥವಾ ಠೇವಣಿ ಇಡುವ ಸಂದರ್ಭದಲ್ಲಿ ವಾರ್ಷಿಕ ಬಡ್ಡಿ ₹ 40,000 ಮೀರುವ ನಿರೀಕ್ಷೆ ಇದ್ದರೆ, ತಕ್ಷಣ ಬ್ಯಾಂಕ್‌ಗಳಿಗೆ ಸಲ್ಲಿಸುವುದು ಯಾವತ್ತೂ ತೆರಿಗೆದಾರನ ದೃಷ್ಟಿಯಿಂದ ಒಳಿತು. ಇಂದಿನ ಡಿಜಿಟಲ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಯುಗದಲ್ಲಿ ಆಯಾ ಬ್ಯಾಂಕಿನ ವೆಬ್‍ಸೈಟಿಗೆ ಭೇಟಿ ನೀಡಿ ಈ ಮೇಲೆ ಉಲ್ಲೇಖಿಸಿರುವ ಫಾರಂಗಳನ್ನು ಆನ್‍ಲೈನ್ ಮೂಲಕವೂ ಸಲ್ಲಿಸಬಹುದು. ಇದಕ್ಕೆ ನೀವು ಕಡ್ಡಾಯವಾಗಿ ಪ್ಯಾನ್ ಹೊಂದಿದವರಾಗಿರಬೇಕು.

ಬಹು ಶಾಖಾ ಠೇವಣಿಗಳು
ಸಾಮಾನ್ಯವಾಗಿ ಒಂದೇ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಠೇವಣಿ ಇರಿಸಿದ ಸಂದರ್ಭದಲ್ಲಿ ಎಲ್ಲ ಶಾಖೆಗಳ ಬಡ್ಡಿ ಮೊತ್ತವನ್ನು ಒಟ್ಟುಗೂಡಿಸಿ ತೆರಿಗೆ ಕಡಿತದ ಮಿತಿಯಾದ ₹ 40,000 ಲೆಕ್ಕ ಹಾಕಲಾಗುತ್ತದೆ. ಒಬ್ಬ ಖಾತೆದಾರನ ಹೆಸರಲ್ಲಿರುವ ಪ್ಯಾನ್ ಹಾಗೂ ಬ್ಯಾಂಕ್ ನೀಡುವ ಗ್ರಾಹಕ ಸಂಖ್ಯೆಯ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿ ಎಲ್ಲ ಶಾಖೆಗಳ ಬಡ್ಡಿಯನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಆಯಾ ಫಾರಂಗಳನ್ನು ಭರ್ತಿ ಮಾಡುವಾಗ ಈ ಎಲ್ಲ ಠೇವಣಿಗಳ ವಿವರಗಳನ್ನು ನೀಡಬೇಕಾಗುತ್ತದೆ.

ಬಹು ವಾರ್ಷಿಕ ಠೇವಣಿಗಳು
ಹೂಡಿಕೆದಾರರ ಆರ್ಥಿಕ ಕ್ಷಮತೆಗೆ ತಕ್ಕಂತೆ ಠೇವಣಿಗಳು ದೀರ್ಘಾವಧಿ ಅಥವಾ ಅಲ್ಪಾವಧಿ ಕಾಲದ್ದಾಗಿರಬಹುದು. ಅಂತಹ ಸಂದರ್ಭದಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ಉದಾಹರಣೆಗೆ 3 ರಿಂದ 5 ವರ್ಷದ ಅವಧಿಯ ಠೇವಣಿಗಳನ್ನು ತೆರೆದ ಸಂದರ್ಭದಲ್ಲಿ ಬಡ್ಡಿ ಮೊತ್ತ ಠೇವಣಿಯ ಅವಧಿ ಪೂರ್ಣಗೊಂಡ ನಂತರ ಮೂಲ ಠೇವಣಿಯೊಂದಿಗೆ ಪಾವತಿಸಲಾಗುತ್ತದೆ.

ಆದರೂ ಪ್ರತಿ ವರ್ಷ ನಿಗದಿತ ಬಡ್ಡಿಯನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ, ಫಾರಂ 15ಜಿ ಹಾಗೂ 15ಎಚ್ ಅನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಸಲ್ಲಿಸುವುದು ಅನಿವಾರ್ಯ. ಇದನ್ನು ಸಲ್ಲಿಸದಿದ್ದ ಸಂದರ್ಭದಲ್ಲಿ ಬಡ್ಡಿಯ ಶೇಕಡಾ 10ರಷ್ಟು ಮೊತ್ತವನ್ನು ತೆರಿಗೆಯ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ.

ಏನೇನು ಮಾಹಿತಿಯ ತುಂಬಬೇಕು
ಠೇವಣಿದಾರರು ತಮ್ಮ ವೈಯಕ್ತಿಕ ವಿವರಗಳನ್ನಲ್ಲದೆ ಒಟ್ಟು ಆದಾಯದ ವಿವರಗಳನ್ನೂ ಇಲ್ಲಿ ನೀಡಬೇಕಾಗುತ್ತದೆ.ನೀವು ಬೇರೆ ಬೇರೆ ಬ್ಯಾಂಕ್‍ಗಳಲ್ಲಿ ಹಂತ ಹಂತವಾಗಿ ಠೇವಣಿ ಇಡುತ್ತಾ ಹೋದಂತೆ ಪ್ರತಿಬ್ಯಾಂಕ್‍ಗಳಿಗೆ ಕೊಡುವ ವಿವರದಲ್ಲೂ ಕ್ರೋಡೀಕೃತ ಮೊತ್ತವನ್ನು ಹಾಗೂ ಆ ವರ್ಷದಲ್ಲಿ ಈ ಹಿಂದೆ ಸಲ್ಲಿಸಿದ ಎಲ್ಲಾ ಫಾರಂಗಳ ಮಾಹಿತಿಯನ್ನೂ ನೀಡಬೇಕಾಗುತ್ತದೆ.

ಈ ರೀತಿ ಭರ್ತಿ ಮಾಡಿ ಕೊಟ್ಟ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆಗೆ ಬ್ಯಾಂಕ್‍ಗಳು ಸಲ್ಲಿಸುತ್ತವೆ. ಹೀಗಾಗಿ ಆಯಾ ವಯೋಮಿತಿಗೆ ಸಂಬಂಧಿಸಿದಂತೆ ವಾರ್ಷಿಕ ನಿವ್ವಳ ಆದಾಯ ಗರಿಷ್ಟ ವಿನಾಯ್ತಿ ಮೊತ್ತಕ್ಕಿಂತ ಅಧಿಕ ಇರುವವರು ಈ ಫಾರಂಗಳನ್ನು ಸಲ್ಲಿಸಿದಲ್ಲಿ ಅವುಗಳನ್ನು ಬ್ಯಾಂಕ್‍ಗಳು ಪರಿಗಣಿಸುವಂತಿಲ್ಲ. ಅಂಥ ಫಾರಂಗಳು ಸಿಂಧುವಲ್ಲ. ಮೇಲೆ ಉಲ್ಲೇಖಿಸಿದ ಫಾರಂಗಳನ್ನು ಉದ್ದೇಶ ಪೂರ್ವಕವಾಗಿ ತೆರಿಗೆ ಕಡಿತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸಲ್ಲಿಸಿರುವುದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದರೆ ಅಂತಹ ತೆರಿಗೆದಾರರ ಮೇಲೆ ಕ್ರಮ ಜರುಗಿಸುವ ಅವಕಾಶವನ್ನು ಕಾನೂನಿನಲ್ಲಿ ಕಲ್ಪಿಸಲಾಗಿದೆ.

ಇತರ ಹೂಡಿಕೆಗಳು
ಯಾವುದೇ ತೆರಿಗೆದಾರ ಉದ್ಯೋಗಿಯಾಗಿರಬಹುದು, ಅಥವಾ ಸ್ವಂತ ವೃತ್ತಿ- ವ್ಯಾಪಾರ ನಿರ್ವಹಿಸುತ್ತಿರಬಹುದು . ಅದೇನೇ ಇದ್ದರೂ ತನ್ನ ಆದಾಯಕ್ಕೆ ಸರಿಹೊಂದಿಕೊಂಡು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಹೂಡಿಕೆಗಳಲ್ಲಿ ತಮ್ಮ ಹಣ ತೊಡಗಿಸಿಕೊಳ್ಳುವುದು ಸೂಕ್ತ.

ಯಾವುದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವವರು, ತಮ್ಮ ಸಂಸ್ಥೆಯ ನಿಯಮಗಳಿಗನುಸಾರ ಆಯಾ ಸಾಲಿನ ಅಂದಾಜು ಹೂಡಿಕೆ ವಿವರಗಳನ್ನು ಫಾರಂ 12 ಬಿಬಿಯಲ್ಲಿ ಸಲ್ಲಿಸಬೇಕಾಗುತ್ತದೆ. ಇದು ಉದ್ಯೋಗಿಗೂ ಸಂಸ್ಥೆಗೂ ಇರುವ ತೆರಿಗೆ ಕಡಿತದ ಬಗೆಗಿನ ಅಧಿಕೃತ ದಾಖಲೆಯಾಗಿರುತ್ತದೆ.

ಇದಾದ ನಂತರ ವರ್ಷದ ಕೊನೆಗೆ, ತಮ್ಮ ಹೂಡಿಕೆಯ ನಿಖರವಾದ ದಾಖಲೆಗಳನ್ನು ಸಂಸ್ಥೆಗೆ ಸಲ್ಲಿಸಬೇಕಾಗುತ್ತದೆ. ಇದು ತಮ್ಮ ಮನೆ ಬಾಡಿಗೆ ಪಾವತಿ ದಾಖಲೆಗಳಿರಬಹುದು ಅಥವಾ 80 ಸಿ ಅಡಿ ಸಿಗುವ ತೆರಿಗೆ ವಿನಾಯ್ತಿ ವಿವರಗಳಿರಬಹುದು. ನಿಮ್ಮ ಸಮಯೋಚಿತ ಹಾಗೂ ತೆರಿಗೆ ಕಡಿತದ ಬಗೆಗಿನ ಸರಿಯಾದ ಕಾಳಜಿ ವರ್ಷದ ಕೊನೆಗೆ ಕಂಡುಬರುವ ಅನೇಕ ತೊಂದರೆಗಳನ್ನು ಸರಿಯಾಗಿ ನಿಭಾಯಿಸುವಲ್ಲಿ ಸಹಕಾರಿಯಾಗಬಲ್ಲದು.

ಠೇವಣಿದಾರರು ಬ್ಯಾಂಕ್‌ಗೆ ಸಲ್ಲಿಸಬೇಕಾದ ಫಾರಂ ವಿವರ

ಪ್ರಾಯ ಮಿತಿ

60 ರ ಕೆಳಗೆ

80 ರ ಕೆಳಗೆ

80 ರ ಮೇಲೆ

ಅನ್ವಯವಾಗುವ ಫಾರಂ

ಫಾರಂ 15ಜಿ

ಫಾರಂ 15 ಹೆಚ್

ಫಾರಂ 15 ಹೆಚ್

ವಾರ್ಷಿಕ ನಿವ್ವಳ ಆದಾಯ ಮಿತಿ

₹ 2.50 ಲಕ್ಷ

₹ 3 ಲಕ್ಷಗೊಳಗೆ

₹ 5 ಲಕ್ಷಗೊಳಗೆ

ಉಳಿತಾಯ ಖಾತೆ ಬಡ್ಡಿಗಿರುವ ತೆರಿಗೆ ವಿನಾಯ್ತಿ (ಸೆಕ್ಷನ್ 80 ಟಿಟಿಎ)

₹ 10000

₹ 10000

₹ 50000

ಠೇವಣಿ ಬಡ್ಡಿ ಇತ್ಯಾದಿಗಳಿಗಿರುವ ತೆರಿಗೆ ವಿನಾಯ್ತಿ (ಸೆಕ್ಷನ್ 80 ಟಿಟಿ ಬಿ)

ಇಲ್ಲ

ಇಲ್ಲ

ಬಡ್ಡಿಯ ಮೇಲಿನ ಟಿಡಿಎಸ್ ವಿನಾಯ್ತಿ ಮಿತಿ

₹ 40000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.