ಮುಂಬೈ: ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿಯನ್ನು ಪ್ರಸ್ತುತ ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸುವುದಾಗಿ ಆರ್‌ಬಿಐ ಶುಕ್ರವಾರ ಪ್ರಕಟಿಸಿದೆ. ಪುನರಾವರ್ತಿತ ಪಾವತಿಗಳಿಗೆ ಇ-ಮ್ಯಾಂಡೇಟ್ ಮಿತಿಯನ್ನು ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಡಿಸೆಂಬರ್ ದ್ವೈಮಾಸಿಕ ಹಣಕಾಸು ನೀತಿಯನ್ನು ಬಿಡುಗೊಳಿಸಿರುವ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ವಿವಿಧ ವರ್ಗಗಳ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ವಹಿವಾಟುಗಳ ಮಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.

‘ಈಗ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಯುಪಿಐ ವಹಿವಾಟಿನ ಮಿತಿಯನ್ನು ಪ್ರತಿ ವಹಿವಾಟಿಗೆ ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ’ಎಂದು ಹೇಳಿದರು.

ವರ್ಧಿತ ಮಿತಿಯು ಶಿಕ್ಷಣ ಮತ್ತು ಆರೋಗ್ಯ ಉದ್ದೇಶಗಳಿಗಾಗಿ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಸಹಾಯ ಮಾಡುತ್ತದೆ.

ಇ-ಮ್ಯಾಂಡೇಟ್ ಫ್ರೇಮ್‌ವರ್ಕ್ ಅಡಿಯಲ್ಲಿ, ಪ್ರಸ್ತುತ ₹15,000ಕ್ಕಿಂತ ಹೆಚ್ಚಿನ ಪುನರಾವರ್ತಿತ ಪಾವತಿಗಳಿಗೆ ಅಡಿಶನಲ್ ಫ್ಯಾಕ್ಟರ್ ಆಫ್ ಅಥೆಂಟಿಫಿಕೇಶನ್ (ಎಎಫ್‌ಎ) ಅಗತ್ಯವಿದೆ.

‘ಮ್ಯೂಚುವಲ್ ಫಂಡ್ ಚಂದಾದಾರಿಕೆಗಳು, ವಿಮಾ ಪ್ರೀಮಿಯಂ ಚಂದಾದಾರಿಕೆಗಳು ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿಗಳ ಪುನರಾವರ್ತಿತ ಪಾವತಿಗಳಿಗಾಗಿ ಪ್ರತಿ ವಹಿವಾಟಿಗೆ ಈ ಮಿತಿಯನ್ನು ₹1 ಲಕ್ಷಕ್ಕೆ ಹೆಚ್ಚಿಸಲು ಈಗ ಪ್ರಸ್ತಾಪಿಸಲಾಗಿದೆ' ಎಂದು ಗವರ್ನರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.