ಬೆಂಗಳೂರು: ಕೆಲಸದ ಒತ್ತಡ ಬದಿಗಿಟ್ಟು ಒಂದಿಷ್ಟು ದಿನ ರಜೆ ತೆಗೆದುಕೊಂಡು ಪ್ರವಾಸ ಹೋಗಿದ್ದೀರಿ ಅನ್ನಿ. ಬೀಚಿನಲ್ಲೋ, ಯಾವುದೋ ಪ್ರಕೃತಿ ರಮಣೀಯ ಪ್ರದೇಶದಲ್ಲೋ ಕಾಲ ಕಳೆಯತ್ತಿದ್ದೀರಿ ಅನ್ನಿ. ಆ ವೇಳೆಗೆ ಸಹೋದ್ಯೋಗಿಯಿಂದ ಕೆಲಸ ಸಂಬಂಧ ಕರೆ / ಇ–ಮೇಲ್ ಬಂದರೆ? ಇಡೀ ನಿಮ್ಮ ಸಂಭ್ರಮವೇ ಮೊಟಕುಗೊಳ್ಳುತ್ತದೆ. ಮತ್ತದೇ ಕಚೇರಿಯ ಒತ್ತಡ ತುಂಬಿಕೊಳ್ಳಲು ಆರಂಭಿಸುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಕಂಪನಿಯೊಂದು ಹೊಸ ನಿಯಮವೊಂದನ್ನು ಪರಿಚಯಿಸಿದೆ.

ರಜೆಯಲ್ಲಿರುವ ಸಹೋದ್ಯೋಗಿಗೆ ಕರೆ ಮಾಡಿ ತೊಂದರೆ ನೀಡಿದಲ್ಲಿ ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ಹೊಸ ನಿಯಮವೊಂದನ್ನು ‘ಈ‘ ಕಂಪನಿ ಜಾರಿಗೆ ತಂದಿದೆ.

ಮುಂಬೈ ಮೂಲದ ಆನ್ಲೈನ್ ಫ್ಯಾಂಟಸಿ ಗೇಮ್ ಸಂಸ್ಥೆ ‘ಡ್ರೀಮ್ 11‘ ಈ ನಿಯಮವನ್ನು ಜಾರಿಗೆ ತಂದಿದೆ. ರಜೆಯಲ್ಲಿರುವ ಸಹೋದ್ಯೋಯನ್ನು ಕೆಲಸದ ಸಂಬಂಧ ಸಂಪರ್ಕಿಸಿದರೆ, ಅವರಿಗೆ ಒಂದು ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ಕಂಪನಿಯ ಸಹ ಸಂಸ್ಥಾಪಕ ಭವಿತ್ ಸೇತ್ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ವರ್ಷದಲ್ಲಿ ಒಂದು ಬಾರಿ ಒಂದು ವಾರಗಳ ಕಾಲ ಉದ್ಯೋಗಿಗಳಿಗೆ ರಜೆ ನೀಡಲಾಗುವುದು. ಈ ವೇಳೆ ಯಾವುದೇ ಕರೆ, ಇ–ಮೇಲ್ಗಳ ತೊಂದರೆ ಇರುವುದಿಲ್ಲ. ಒಂದು ವಾರ ಆರಾಮವಾಗಿ ಕಳೆಯಬಹುದು. ನಮ್ಮ ಉದ್ಯಮ ಯಾರ ಮೇಲೆಯೂ ಅವಲಂಬಿತವಾಗಿಲ್ಲ ಎನ್ನುವುದನ್ನು ತಿಳಿದುಕೊಳ್ಳಲು ಇದು ಸಹಾಯವಾಗುತ್ತದೆ‘ ಎಂದು ನುಡಿದಿದ್ದಾರೆ.

‘ಒಂದು ವಾರಗಳ ಯಾವುದೇ ತೊಂದರೆ ಇಲ್ಲದ ರಜೆಯನ್ನು ಅನುಭವಿಸಿದ ಬಳಿಕ, ಮತ್ತೆ ಹೊಸ ಹುರುಪಿನೊಂದಿಗೆ ಕೆಲಸಕ್ಕೆ ಬಂದು, ಉದ್ಯೋಗಿಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಬಹುದು‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.