ನವದೆಹಲಿ: ದೇಶದಲ್ಲಿ ನಿರ್ಮಾಣ ವಲಯದ ಚಟುವಟಿಕೆಗಳು ಗರಿಗೆದರಿವೆ. ಹಾಗಾಗಿ, ಮುಂದಿನ ಮೂರ್ನಾಲ್ಕು ತಿಂಗಳವರೆಗೂ ಟಿಎಂಟಿ ಬಾರ್‌ಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಟಾಟಾ ಸ್ಟೀಲ್ ಲಿಮಿಟೆಡ್‌ನ (ಉತ್ಪಾದನಾ ವಿಭಾಗ) ಉಪಾಧ್ಯಕ್ಷ ಆಶಿಶ್ ಅನುಪಮ್ ಹೇಳಿದ್ದಾರೆ.

‘ಹಬ್ಬದ ಋತು ಮುಕ್ತಾಯವಾಗಿದ್ದು, ಕಾರ್ಮಿಕರು ಕೆಲಸಕ್ಕೆ ಮರಳಿದ್ದಾರೆ. ಮಳೆಗಾಲ ಕೂಡ ಮುಕ್ತಾಯವಾಗಿದೆ. ಹೆಚ್ಚು ಬಿಸಿಲು ಇಲ್ಲದೇ ಇರುವುದು ನಿರ್ಮಾಣ ವಲಯಕ್ಕೆ ಅನುಕೂಲಕರವಾಗಲಿದೆ. ಕಚ್ಚಾ ವಸ್ತುಗಳ ಲಭ್ಯತೆ ಮೇಲೆ ಬೆಲೆ ನಿರ್ಧಾರವಾಗಲಿದೆ. ಹಾಗಾಗಿ, ಬೆಲೆ ಏರಿಕೆ ಬಗ್ಗೆ ಏನನ್ನೂ ಹೇಳಲಾರೆ’ ಎಂದು ತಿಳಿಸಿದ್ದಾರೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಬಿಗ್‌ಮಿಂಟ್ (ಸ್ಟೀಲ್‌ಮಿಂಟ್) ಪ್ರಕಾರ, ಟಿಎಂಟಿ ಬಾರ್ ಬೆಲೆಯು ಸೆಪ್ಟೆಂಬರ್‌ನಲ್ಲಿ ಒಂದು ಟನ್‌ಗೆ ₹56,700 ಇದ್ದರೆ, ನವೆಂಬರ್‌ಗೆ ₹55,900ಕ್ಕೆ ಇಳಿಕೆ ಆಗಿತ್ತು. ಇಂಡಕ್ಷನ್ ಫರ್ನೇಸಸ್ ಮೂಲಕ ಉತ್ಪಾದಿಸುವ ಟಿಎಂಟಿ ಬಾರ್‌ಗಳ ಬೆಲೆಯು ಒಂದು ಟನ್‌ಗೆ ಸೆಪ್ಟೆಂಬರ್‌ನಲ್ಲಿ ₹52 ಸಾವಿರ ಇದ್ದರೆ, ನವೆಂಬರ್‌ನಲ್ಲಿ ₹49 ಸಾವಿರಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.