ಕಲಬುರಗಿ: ಈ ಬಾರಿ ತೊಗರಿ ಕಣಜ ಕಲಬುರಗಿಯಲ್ಲಿ ನೆಟೆ ರೋಗ ಹಾಗೂ ಅತಿವೃಷ್ಟಿಯಿಂದಾಗಿ ಇಳುವರಿ ಕಡಿಮೆಯಾಗಿದ್ದರಿಂದ ತೊಗರಿಬೇಳೆ ಬೆಲೆ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ತಿಂಗಳ ಹಿಂದೆ ₹ 130ಕ್ಕೆ ಕೆ.ಜಿ.ಯಂತೆ ಮಾರಾಟವಾಗುತ್ತಿದ್ದ ತೊಗರಿಬೇಳೆ ಇತ್ತೀಚೆಗೆ ಕೆ.ಜಿ.ಗೆ ₹ 175ರಿಂದ ₹ 180ಕ್ಕೆ ಏರಿಕೆಯಾಗಿದೆ. ಐದು ಕೆ.ಜಿ. ಪ್ಯಾಕ್ ಮಾಡಿದ ತೊಗರಿಬೇಳೆ ಬೆಲೆ ₹ 892ಕ್ಕೆ ಸಿಗುತ್ತಿದೆ.

ಮಾರುಕಟ್ಟೆಗೆ ತೊಗರಿ ಆವಕ ಗಣನೀಯವಾಗಿ ಕಡಿಮೆಯಾಗಿದ್ದು, ದರವೂ ಪ್ರತಿ ಕ್ವಿಂಟಲ್‌ಗೆ ₹ 12 ಸಾವಿರಕ್ಕೆ ಏರಿಕೆಯಾಗಿದೆ.

ಸಹಜವಾಗಿಯೇ ಬೇಳೆ ಉತ್ಪಾದನೆ ಮೇಲೆಯೂ ದರ ಏರಿಕೆ ಪರಿಣಾಮ ಬೀರಿದೆ. ಕಲಬುರಗಿಯಲ್ಲಿ 250ಕ್ಕೂ ಅಧಿಕ ದಾಲ್‌ಮಿಲ್‌ಗಳಿದ್ದು, ತೊಗರಿಯನ್ನು ಖರೀದಿಸಿ ಸಂಸ್ಕರಣೆ ಮಾಡಿ ತೊಗರಿ
ಬೇಳೆಯನ್ನು ತಯಾರಿಸುತ್ತಾರೆ. ಇಲ್ಲಿನ ತೊಗರಿ ಬೇಳೆಯು
ರಾಜ್ಯದ ಬೆಂಗಳೂರು, ಮಂಗಳೂರು ಅಷ್ಟೇ ಅಲ್ಲದೇ ದೂರದ ತಮಿಳುನಾಡು, ಗುಜರಾತ್‌ಗೂ ರವಾನೆಯಾಗುತ್ತದೆ.

‘ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 130ರಂತೆ ತೊಗರಿಬೇಳೆ ಮಾರಾಟ ವಾಗುತ್ತಿತ್ತು. ಇದೀಗ ₹ 175ಕ್ಕೆ
ಮಾರಾಟವಾಗುತ್ತಿದೆ. ಮುಂಚೆ ಒಮ್ಮೆಲೇ ಐದು ಕೆ.ಜಿ. ಒಯ್ಯುತ್ತಿದ್ದ
ಗ್ರಾಹಕರು ಈಗ ಒಂದು ಅಥವಾ ಎರಡು ಕೆ.ಜಿ. ಮಾತ್ರ ಖರೀದಿ ಮಾಡುತ್ತಿದ್ದಾರೆ’ ಎಂದು ಕಲಬುರಗಿ ಕಿರಾಣಿ ಅಂಗಡಿಯೊಂದರ ಮಾಲೀಕ ಶ್ರವಣ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.