ನವದೆಹಲಿ: ಟೊಯೋಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ಕರ್ನಾಟಕದ ಬಿಡದಿಯಲ್ಲಿರುವ ತನ್ನ ತಯಾರಿಕಾ ಘಟಕದ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್ಎಸ್) ಜಾರಿಗೊಳಿಸಿದೆ.

ಘಟಕದಲ್ಲಿ ಕನಿಷ್ಠ ಐದು ವರ್ಷಗಳವರೆಗೆ ಕೆಲಸ ಮಾಡಿರುವ ಕಾರ್ಮಿಕ ಸಂಘಟನೆಯ ಸದಸ್ಯರಾಗಿರುವವರಿಗೆ ಮತ್ತು ಮೇಲ್ವಿಚಾರಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ‘ನವ ಜೀವನ ಯೋಜನೆ’ ಪರಿಚಯಿಸಲಾಗಿದೆ. ಈ ಯೋಜನೆಗೆ ಸೆಪ್ಟೆಂಬರ್ 22 ರಿಂದ ಚಾಲನೆ ನೀಡಲಾಗಿದೆ. ಈ ತಿಂಗಳ 23ರವರೆಗೆ ಅವಕಾಶ ಕಲ್ಪಿಸಲಾಗಿದೆ.

‘ಸಿಬ್ಬಂದಿಯು ಸ್ವ–ಇಚ್ಛೆಯಿಂದ ಈ ಯೋಜನೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಂಪನಿಯ ವಹಿವಾಟಿನ ಪರಿಸ್ಥಿತಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ‘ಟಿಕೆಎಂ’ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಅವರು ತಿಳಿಸಿದ್ದಾರೆ.

‘ಸಾಮಾನ್ಯ ನಿವೃತ್ತಿಯಲ್ಲಿ ಸಿಗುವ ಪ್ರಯೋಜನಗಳಿಗಿಂತಲೂ ಹೆಚ್ಚುವರಿ ಕೊಡುಗೆಗಳು ಇದರಲ್ಲಿ ಲಭ್ಯವಾಗಲಿವೆ’ ಎಂದೂ ಹೇಳಿದ್ದಾರೆ.

ವಾಹನ ಉದ್ದಿಮೆಯು ಮಾರಾಟ ಕುಸಿತದ ಎದುರಿಸುತ್ತಿರುವಾಗ ‘ಟಿಕೆಎಂ’ನಲ್ಲಿ ‘ವಿಆರ್ಎಸ್’ ಜಾರಿಗೆ ತರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.