ಬೆಂಗಳೂರು: ಗ್ರಾಹಕರು ಯಾವುದೇ ಪ್ಲ್ಯಾನ್ ಬಳಕೆ ಮಾಡದೇ ಇದ್ದರೂ ಮತ್ತು ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಅವರಿಗೆ ಪೋರ್ಟ್ ಎಸ್‌ಎಂಎಸ್ ಸೌಲಭ್ಯವನ್ನು ನೀಡಬೇಕು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಎಲ್ಲ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿದೆ.

ಪ್ಲ್ಯಾನ್ ವೋಚರ್ ಇಲ್ಲದಿದ್ದರೆ ಎಸ್‌ಎಂಎಸ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಮತ್ತು ಮುಖ್ಯ ಖಾತೆಯಲ್ಲಿ ಹಣವಿಲ್ಲದೇ ಇದ್ದರೂ ಪೋರ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಗ್ರಾಹಕರು ಟ್ರಾಯ್‌ಗೆ ದೂರು ನೀಡಿರುವ ಬೆನ್ನಲ್ಲೇ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಒಂದು ನೆಟ್‌ವರ್ಕ್‌ನಿಂದ ಮತ್ತೊಂದು ನೆಟ್‌ವರ್ಕ್‌ಗೆ ಗ್ರಾಹಕರು ಬದಲಾಯಿಸಬೇಕಾದರೆ ಪೋರ್ಟ್ ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ.

ಆದರೆ ಖಾತೆಯಲ್ಲಿ ಹಣವಿಲ್ಲದೆ ಮತ್ತು ಪ್ಲ್ಯಾನ್ ವೋಚರ್ ಇಲ್ಲದಿರುವ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳು ಪೋರ್ಟ್ ಮಾಡಲು ನಿರಾಕರಿಸುತ್ತಿದ್ದವು.

ಇನ್ನು ಮುಂದೆ ಎಲ್ಲ ಗ್ರಾಹಕರಿಗೆ ಕೂಡ ಪೋರ್ಟ್ ಎಸ್‌ಎಂಎಸ್ ಕಳುಹಿಸಲು ಯಾವುದೇ ಅಡ್ಡಿ ಉಂಟುಮಾಡಬಾರದು ಎಂದು ಟ್ರಾಯ್ ಆದೇಶಿಸಿದೆ.

5ಜಿ ಬರುತ್ತಿದೆ ವೇಗವಾಗಿ... ಬರಮಾಡಿಕೊಳ್ಳುವ ಮೊದಲು ಇದನ್ನೊಮ್ಮೆ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.