ಟೋಕಿಯೊ: ಉಕ್ರೇನ್ನಆಕ್ರಮಣವನ್ನು ವಿರೋಧಿಸಿ ರಷ್ಯಾದ ಮೇಲೆ ಹಲವು ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ಈ ಸಾಲಿಗೆ ಜಪಾನ್ ಮೂಲದ ಹೋಂಡಾ ಕಂಪನಿಯೂ ಸೇರಿಕೊಂಡಿದೆ.

ರಷ್ಯಾದ ಆಕ್ರಮಣವನ್ನು ವಿರೋಧಿಸಿರುವ ಹೋಂಡಾ ಕಂಪನಿಯು ತನ್ನ ಉತ್ಪನ್ನಗಳಾದ ಕಾರು ಮತ್ತು ಬೈಕ್ಗಳ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ ಎಂದು ಸುದ್ದಿಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ.

ಇದೇ ವೇಳೆ ರಷ್ಯಾದಲ್ಲಿ ಹೂಡಿಕೆ ಮಾಡಿದರೆ ಆರ್ಥಿಕವಾಗಿ ನಷ್ಟವಾಗಬಹುದು ಎಂಬ ಆತಂಕವನ್ನೂ ಕಂಪನಿ ವ್ಯಕ್ತಪಡಿಸಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ (ಫೆ.24) ಉಕ್ರೇನ್ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದು, ಇದರ ಬೆನ್ನಲ್ಲೇ ರಷ್ಯಾದ ಸೇನಾಪಡೆಗಳು ಉಕ್ರೇನ್ನ ಪ್ರಮುಖ ವಾಯುನೆಲೆಗಳು, ನಗರಗಳ ಮೇಲೆ ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಸಿವೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

ಇದನ್ನೂ ಓದಿ–ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದ ಆ್ಯಪಲ್, ಬೋಯಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.