ನವದೆಹಲಿ: ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯದಿಂದ ನಡೆದ ಇ–ಟೆಂಡರ್ನಲ್ಲಿ ಕರ್ನಾಟಕ ಮತ್ತು ಬಿಹಾರದಲ್ಲಿ ಪ್ರಮುಖ ಖನಿಜ ನಿಕ್ಷೇಪದ ಗಣಿಗಾರಿಕೆಗೆ ಟೆಂಡರ್ ಪಡೆಯಲಾಗಿದೆ ಎಂದು ವೇದಾಂತ ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ಕರ್ನಾಟಕದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗೊಲ್ಲರಹಟ್ಟಿ ಮತ್ತು ಮಲ್ಲೇನಹಳ್ಳಿ ಬಳಿ ನಿಕಲ್, ಕ್ರೋಮಿಯಂ ಮತ್ತು ಪ್ಲಾಟಿನಂ ಗ್ರೂಪ್ಗೆ (ಪಿಜಿಇ ಬ್ಲಾಕ್) ಸೇರಿದ ಲೋಹಗಳ ಗಣಿಗಾರಿಕೆಗೆ ಟೆಂಡರ್ ಪಡೆಯಲಾಗಿದೆ. ಬಿಹಾರದಲ್ಲಿ ಗೆಂಜನಾ ನಿಕಲ್, ಕ್ರೋಮಿಯಂ ಮತ್ತು ಪಿಜಿಇ ಬ್ಲಾಕ್ಗೆ ಟೆಂಡರ್ ಸಿಕ್ಕಿದೆ ಎಂದು ಕಂಪನಿಯು ತಿಳಿಸಿದೆ.

ಪ್ಲಾಟಿನಂ ಗ್ರೂಪ್ನಲ್ಲಿ ಪ್ಲಾಟಿನಂ, ಪಲಾಡಿಯಂ, ರೋಡಿಯಂ, ರುದೇನಿಯಂ, ಆಸ್ಮಿಯಂ ಹಾಗೂ ಇರಿಡಿಯಂ ಅಂಶಗಳು ಸೇರಿವೆ. ಪ್ಲಾಟಿನಂ ಅತ್ಯಮೂಲ್ಯ ಲೋಹವಾಗಿದೆ. ಅತಿಹೆಚ್ಚು ಉಷ್ಣತೆ ತಡೆಯುವ ಲೋಹವೂ ಆಗಿದೆ. ಹಾಗಾಗಿ, ಹಲವು ಲೋಹಸಂಬಂಧಿ ಕೈಗಾರಿಕೆಗಳಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ ಎಂದು ಭೂಗರ್ಭಶಾಸ್ತ್ರ ತಜ್ಞರು ಹೇಳುತ್ತಾರೆ.

ಲೋಹದ ನಿಕ್ಷೇಪಗಳ ಪರಿಶೋಧನೆಯು ಸ್ಥಳಾನ್ವೇಷಣೆ (ಜಿ4), ಪ್ರಾಥಮಿಕ ಪರಿಶೋಧನೆ (ಜಿ3), ಸಾಮಾನ್ಯ ಪರಿಶೋಧನೆ (ಜಿ2) ಹಾಗೂ ಪರಿಪೂರ್ಣ ಪರಿಶೋಧನೆ (ಜಿ1) ಎಂಬ ಹಂತದಲ್ಲಿ ನಡೆಯುತ್ತದೆ ಎಂದು ಸಚಿವಾಲಯವು ತಿಳಿಸಿದೆ.

ಹಾಸನ ಜಿಲ್ಲೆಯಲ್ಲಿ ಖನಿಜಗಳ ಬಗ್ಗೆ ಜಿ4 ಹಂತದ ಸ್ಥಳಾನ್ವೇಷಣೆಗಾಗಿ ವೇದಾಂತ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದೆ.

ಸಚಿವಾಲಯದಿಂದ ನಡೆದ ಖನಿಜ ನಿಕ್ಷೇಪಗಳ ಎರಡನೇ ಸುತ್ತಿನ ಹರಾಜಿನಲ್ಲಿ ಒಂದು ಬ್ಲಾಕ್ ಮತ್ತು ಮೂರನೇ ಸುತ್ತಿನಲ್ಲಿ ಮತ್ತೊಂದು ನಿಕ್ಷೇಪವನ್ನು ವೇದಾಂತ ಕಂಪನಿಯು ಪಡೆದಿದೆ.

ಜಿ4 ಹಂತ ಎಂದರೇನು?

ಜಿ4 ಹಂತದಲ್ಲಿ ಗುರುತುಪಡಿಸಿರುವ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಖನಿಜದ ಸಾಮರ್ಥ್ಯ ಅಥವಾ ಆರಂಭಿಕ ಹಂತದಲ್ಲಿರುವ ಖನಿಜ ಪ್ರಮಾಣದ ಅಸ್ತಿತ್ವವನ್ನು ಗುರುತಿಸಲು ತಳಮಟ್ಟದ ಪರಿಶೋಧನೆ ನಡೆಸಲಾಗುತ್ತದೆ. ಗೊಲ್ಲರಹಟ್ಟಿ ಮತ್ತು ಮಲ್ಲೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೇದಾಂತ ಕಂಪನಿಯು ಈ ಲೋಹಗಳ ಬಗ್ಗೆ ಸ್ಥಳಾನ್ವೇಷಣೆ ನಡೆಸಲಿದೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.