ನವದೆಹಲಿ: ಬ್ಯಾಂಕಿಂಗ್ ತಜ್ಞ ಅಶೋಕ್ ವಾಸ್ವಾನಿ ಅವರನ್ನು ಕೊಟಕ್ ಮಹೀಂದ್ರಾ ಬ್ಯಾಂಕ್ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

2023ರ ಸೆಪ್ಟೆಂಬರ್ನಲ್ಲಿ ಉದಯ್ ಕೊಟಕ್ ಅವರು ಎಂಡಿ ಹಾಗೂ ಸಿಇಒ ಸ್ಥಾನದಿಂದ ನಿರ್ಗಮಿಸಿದ ನಂತರ ದೀಪಕ್ ಗುಪ್ತಾ ಆ ಸ್ಥಾನಗಳಿಗೆ ಹಂಗಾಮಿಯಾಗಿ ನಿಯುಕ್ತಿಗೊಂಡಿದ್ದರು.

ಅಶೋಕ್ ವಾಸ್ವಾನಿ ಅವರ ಆಡಳಿತ ಅವಧಿ ಜನವರಿ 1ರಿಂದ ಪ್ರಾರಂಭವಾಗಿದೆ. ಮೂರು ವರ್ಷದ ಅಧಿಕಾರಾವಧಿ ಇದಾಗಿದ್ದು ಅವರ ನೇಮಕವನ್ನು ಆರ್ಬಿಐ ಅನುಮೋದಿಸಿದೆ ಎಂದು ಬ್ಯಾಂಕ್ ತಿಳಿಸಿದೆ.

ಕಂಪನಿ ಸೆಕ್ರೆಟರೀಸ್ ವಿಷಯದಲ್ಲಿ ಚಾರ್ಟಡ್ ಅಕೌಂಟೆಂಟ್ ಆಗಿದ್ದ ವಾಸ್ವಾನಿ ಅವರು, ಮುಂಬೈನ Sydenham College of Commerce and Economics ನ ಹಳೆಯ ವಿದ್ಯಾರ್ಥಿ. ಅವರು ಸಿಟಿ ಗ್ರೂಪ್ ಕಂಪನಿ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸುಮಾರು ಮೂರು ದಶಕದ ಬ್ಯಾಂಕಿಂಗ್ ಅನುಭವ ಹೊಂದಿದ್ದಾರೆ.

ಕೊಟಕ್ ಮಹೀಂದ್ರಾ ಬ್ಯಾಂಕ್ನ ಹಂಗಾಮಿ ಅಧ್ಯಕ್ಷರಾಗಿರುವ ಸಿ.ಎಸ್. ರಾಜನ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
.2024ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ₹70 ಸಾವಿರಕ್ಕೆ ತಲುಪಲಿದೆ ಚಿನ್ನದ ಬೆಲೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.