ಮುಂಬೈ: ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರುವ ಕಡೆಗಳಿಂದ ಸರಕುಗಳನ್ನು ಖರೀದಿಸಬೇಕು ಎಂದು ಹೇಳುವ ಮೂಲಕ ಬಜಾಜ್ ಆಟೊ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಚೀನಾದೊಂದಿಗೆ ವ್ಯಾಪಾರ ಮುಂದುವರಿಸುವ ಒಲವು ವ್ಯಕ್ತಪಡಿಸಿದ್ದಾರೆ.

‘ಏಷ್ಯಾ ಆರ್ಥಿಕ ಸಂವಾದ ಕಾರ್ಯಕ್ರಮದಲ್ಲಿ ಸುಸ್ಥಿರ ಪೂರೈಕೆ ವ್ಯವಸ್ಥೆ ರೂಪಿಸುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಜಗತ್ತಿನಾದ್ಯಂತ ವಿತರಕರು ಮತ್ತು ಪೂರೈಕೆದಾರರನ್ನು ಹೊಂದಿದ್ದೇವೆ. ಹೀಗಾಗಿ ನಾವು ಜಾಗತಿಕ ಕಂಪನಿ ಎಂದು ಭಾವಿಸುತ್ತೇವೆ. ಹೀಗಾಗಿ ನಾವು ಚೀನಾದೊಂದಿಗೆ ವ್ಯಾಪಾರ ಮುಂದುವರಿಸಲೇಬೇಕು ಎಂದು ನಂಬುತ್ತೇನೆ. ಒಂದೊಮ್ಮೆ ಚೀನಾದಂತಹ ದೊಡ್ಡ ದೇಶ, ದೊಡ್ಡ ಮಾರುಕಟ್ಟೆಯನ್ನು ಹೊರತುಪಡಿಸಿ ವ್ಯಾಪಾರ ನಡೆಸಿದರೆ, ಮುಂಬರುವ ದಿನಗಳಲ್ಲಿ ನಾವು ನಮ್ಮ ವ್ಯಾಪಾರದಲ್ಲಿ ಪರಿಪೂರ್ಣ ಎನಿಸಿಕೊಳ್ಳಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.

‘ಕಾರಣಗಳು ಏನೇ ಇರಲಿ, ಜೂನ್–ಜುಲೈ ಅವಧಿಯಲ್ಲಿ ಸರಕುಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರಲಾಯಿತು. ಅದರಲ್ಲಿಯೂ ಮುಖ್ಯವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲು ನಿರ್ಬಂಧಿಸಲಾಯಿತು. ಆದರೆ, ದೇಶಿ ಅಥವಾ ವಿದೇಶಿ ಮಾರುಕಟ್ಟೆಗೆ ಪೂರೈಸಬೇಕಿರುವ ಉತ್ಪನ್ನಗಳ ತಯಾರಿಕೆಗೆ ದೇಶದಲ್ಲಿ ತಯಾರಾಗದೇ ಇರುವ ಬಿಡಿಭಾಗಗಳನ್ನು ಇದ್ದಕ್ಕಿದಂತೆಯೇ ಸಂಗ್ರಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಮೂಲಕ ಪೂರೈಕೆ ವ್ಯವಸ್ಥೆಗೆ ಅಡಚಣೆ ಉಂಟಾಗದಿರುವುದು ಎಷ್ಟು ಮುಖ್ಯ ಎನ್ನುವುದನ್ನು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.