ನವದೆಹಲಿ: ಸರ್ಕಾರಕ್ಕೆ ಸುಳ್ಳು ಸುದ್ದಿಗಳನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ನೀಡುವ ಮಾಹಿತಿ ತಂತ್ರಜ್ಞಾನ (ಐ.ಟಿ) ನಿಯಮಗಳ ಕಠೋರ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಎಡಿಟರ್ಸ್ ಗಿಲ್ಡ್ ಶುಕ್ರವಾರ ಆಗ್ರಹಿಸಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ– 2021ಕ್ಕೆ ಕರಡು ತಿದ್ದುಪಡಿ ತರುವ ಕುರಿತು, ಈ ಹಿಂದೆ ಭರವಸೆ ನೀಡಿದಂತೆ ಸರ್ಕಾರವು ಮಾಧ್ಯಮ ಸಂಸ್ಥೆಗಳು ಮತ್ತು ಮಾಧ್ಯಮ ಸಂಘಟನೆಗಳ ಜೊತೆಗೆ ಸಮಾಲೋಚನೆ ನಡೆಸಬೇಕು ಎಂದೂ ಕೋರಿದೆ.

ಈ ನಿಯಮವು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಫ್ಯಾಕ್ಟ್ ಚೆಕ್ ಘಟಕ ಸ್ಥಾಪಿಸುವ ಅಧಿಕಾರ ನೀಡುತ್ತದೆ. ಈ ಘಟಕವು ಕೇಂದ್ರ ಸರ್ಕಾರದ ವ್ಯವಹಾರಗಳಿಗೆ ಸಂಬಧಿಸಿದ ಯಾವ ಸುದ್ದಿ ಸುಳ್ಳು ಅಥವಾ ದಾರಿತಪ್ಪಿಸುವ ಸುದ್ದಿ ಎಂಬುದನ್ನು ಗುರುತಿಸಲಿದೆ ಎಂದೂ ಗಿಲ್ಡ್ ಹೇಳಿದೆ.

ಈ ಫ್ಯಾಕ್ಟ್ ಚೆಕ್ ಘಟಕವು ಸುಳ್ಳು ಸುದ್ದಿ ಎಂದು ಗುರುತಿಸುವ ಸುದ್ದಿಗಳನ್ನು ಪ್ರಸಾರ ಮಾಡದಂತೆ ಸಚಿವಾಲಯವು ಸಂಬಂಧಿಸಿದ ಸಂಸ್ಥೆಗಳಿಗೆ ಸೂಚನೆ ನೀಡಲಿದೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.