ನವದೆಹಲಿ: ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸನ್ಸ್ಗೆ ಮಾರಾಟ ಮಾಡಿದ ನಂತರ, ಕೇಂದ್ರ ಸರ್ಕಾರವು ಈಗ ಅಲಯನ್ಸ್ ಏರ್ ಸೇರಿದಂತೆ ಏರ್ ಇಂಡಿಯಾದ ನಾಲ್ಕು ಅಂಗಸಂಸ್ಥೆಗಳನ್ನು ನಗದೀಕರಿಸಿಕೊಳ್ಳಲು ಕೆಲಸ ಶುರು ಮಾಡಲಿದೆ.

ಅಲ್ಲದೆ, ₹ 14,700 ಕೋಟಿಗಿಂತ ಹೆಚ್ಚಿನ ಮೌಲ್ಯದ ಜಮೀನು ಮತ್ತು ಕಟ್ಟಡಗಳ ನಗದೀಕರಣವನ್ನೂ ಆರಂಭಿಸಲಾಗುವುದು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.

ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ಅನ್ನು (ಎಐಎಎಚ್ಎಲ್) ನಗದೀಕರಿಸಲು ಯೋಜನೆ ಸಿದ್ಧವಾಗಲಿದೆ. ಅಲಯನ್ಸ್ ಏರ್ ಕಂಪನಿಯನ್ನೂ ನಗದೀಕರಿಸಲಾಗುವುದು ಎಂದು ಪಾಂಡೆ ಅವರು ಹೇಳಿದ್ದಾರೆ. ಎಐಎಎಚ್ಎಲ್ ಅಡಿಯಲ್ಲಿ ಎರಡು ಕಂಪನಿಗಳು ಇವೆ. ಏರ್ ಇಂಡಿಯಾ ಕಂಪನಿಯ ಮಾರಾಟ ಆದ ಹೊರತು ಇತರ ಕಂಪನಿಗಳ ಆಸ್ತಿ ನಗದೀಕರಣ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.