ವಾಷಿಂಗ್ಟನ್: ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್, ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಸದ್ಯ ಅಮೆರಿಕದಲ್ಲಿ ಶೇ 5.25ರಿಂದ ಶೇ 5.50ರಷ್ಟು ಬಡ್ಡಿದರವಿದ್ದು, ಕಳೆದ ವರ್ಷದ ಜುಲೈನಿಂದಲೂ ಬದಲಾವಣೆ ಮಾಡಿಲ್ಲ. ಇದು 23 ವರ್ಷಗಳ ಗರಿಷ್ಠ ಮಟ್ಟವಾಗಿದೆ.

ಬುಧವಾರ ನಡೆದ ಹಣಕಾಸು ನೀತಿ ಸಭೆಯ ಬಳಿಕ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಜೆರೋಮ್ ಪೊವೆಲ್, ‘ಪ್ರಸಕ್ತ ವರ್ಷದ ಆರಂಭದ ಮೂರು ತಿಂಗಳಿನಲ್ಲಿ ನಿರೀಕ್ಷೆಗೂ ಮೀರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹಾಗಾಗಿ, ಹಣದುಬ್ಬರವನ್ನು ಶೇ 2ರ ಮಿತಿಯಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಸಭೆಯ ಈ ನಿರ್ಧಾರವು ದೇಶದ ಆರ್ಥಿಕ ಚಟುವಟಿಕೆಯ ಬೆಳವಣಿಗೆಗೆ ನೆರವಾಗುವ ಜೊತೆಗೆ, ಹಣದುಬ್ಬರದ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಸ್ತುತ ಹಣದುಬ್ಬರವು ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿದೆ. ನಿಗದಿತ ಮಿತಿಗೆ ತರಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಈ ಗುರಿಗೆ ತಗ್ಗಿಸುವುದು ಅನಿಶ್ಚಿತತೆಯಿಂದ ಕೂಡಿದೆ’ ಎಂದರು.

ದೇಶದ ತಯಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳು ಸದೃಢವಾಗಿವೆ. ಇದಕ್ಕೆ ತಕ್ಕಂತೆ ಹಣದುಬ್ಬರವು ನಿರೀಕ್ಷಿತ ಪಥದಲ್ಲಿ ಸಾಗುತ್ತಿಲ್ಲ. ಹಾಗಾಗಿ, ಬಡ್ಡಿದರ ಕಡಿತ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾರ್ಚ್‌ನಲ್ಲಿ ಹಣದುಬ್ಬರವು ಶೇ 3.5ರಷ್ಟು ದಾಖಲಾಗಿದ್ದು, ಫೆಬ್ರುವರಿಗೆ ಹೋಲಿಸಿದರೆ ಶೇ 0.3ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.