ಬೆರಳೆಣಿಕೆಯ ದಿನಗಳಲ್ಲಿ 2022ನೇ ಇಸವಿ ಕೊನೆಗೊಳ್ಳಲಿದೆ. ಹಲವು ಆಗುಹೋಗುಗಳಿಗೆ ಸಾಕ್ಷಿಯಾಗಿ, ಕೋವಿಡ್ ಬಳಿಕದ ವರ್ಷವೊಂದು ಅಂತ್ಯಗೊಳ್ಳುತ್ತಿದೆ. ದೇಶ ಹಾಗೂ ಪ್ರಪಂಚದ ಗಮನ ಸೆಳೆದ ಹಲವು ಉದ್ಯಮ ಒಪ್ಪಂದಗಳಿಗೆ / ಸ್ವಾಧೀನಗಳಿಗೆ ಈ ವರ್ಷ ಸಾಕ್ಷಿಯಾಗಿದೆ. ಅಂಥ ಪ್ರಮುಖ ಉದ್ಯಮ ಸ್ವಾಧೀನಗಳ ಪಟ್ಟಿ ಇಲ್ಲಿದೆ.

1. ವಿಸ್ತಾರ–ಏರ್ ಇಂಡಿಯಾ ವಿಲೀನ

ಟಾಟಾ ಸಮೂಹ ಹಾಗೂ ಸಿಂಗಾಪುರ ಏರ್ಲೈನ್ಸ್ ಜಂಟಿ ಒಡೆತನದ ವಿಸ್ತಾರ ಏರ್ಲೈನ್ಸ್ ಅನ್ನು ಏರ್ ಇಂಡಿಯಾ ಸ್ವಾಧೀನ ಪಡಿಸಿಕೊಂಡಿತು. ವಿಸ್ತಾರವು, ಏರ್ ಇಂಡಿಯಾದೊಂದಿಗೆ ವಿಲೀನವಾಯ್ತು. ಅಲ್ಲದೇ ವಹಿವಾಟಿನ ಭಾಗವಾಗಿ ಸಿಂಗಾಪುರ ಏರ್ಲೈನ್ಸ್ ಏರ್ ಇಂಡಿಯಾದಲ್ಲಿ ₹ 2,058.5 ಕೋಟಿ ಹೂಡಿಕೆ ಮಾಡಲಿದೆ. ಈ ವಿಲೀನ ಪ್ರಕ್ರಿಯೆ 2024ರ ಮಾರ್ಚ್ನಲ್ಲಿ ಪೂರ್ಣಗೊಳ್ಳಲಿದೆ

2. ಎಚ್ಡಿಎಫ್ಸಿ–ಎಚ್ಡಿಎಫ್ಸಿ ಬ್ಯಾಂಕ್ ವಿಲೀನ

ತನ್ನ ಮಾತೃಸಂಸ್ಥೆ ಸಂಸ್ಥೆ ಎಚ್ಡಿಎಫ್ಸಿ ಪ್ರಾಪರ್ಟಿ ವೆಂಚರ್ಸ್ ಲಿಮಿಟೆಡ್ (ಎಚ್ಪಿವಿಎಲ್) ಅನ್ನು ತನ್ನೊಳಗೆ ವಿಲೀನಗೊಳಿಸುವುದಕ್ಕೆ ಎಚ್ಡಿಎಫ್ಸಿ ಬ್ಯಾಂಕ್ಗೆ ಸೆಬಿ ಅನುಮತಿ ನೀಡಿತು. ಸುಮಾರು 40 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ ಎಚ್ಡಿಎಫ್ಸಿ ಪ್ರಾಪರ್ಟಿ ವೆಂಚರ್ಸ್ ಲಿಮಿಟೆಡ್, ಎಚ್ಡಿಎಫ್ಸಿಯೊಂದಿಗೆ ವಿಲೀನವಾಗಿದ್ದು ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ವಹಿವಾಟು ಎಂದು ಹೇಳಲಾಗಿದೆ.

ಇದನ್ನೂ ಓದಿ:Year Ender 2022 | ಕ್ರೀಡಾ ಜಗತ್ತನ್ನು ದಿಗ್ಭ್ರಮೆಗೆ ತಳ್ಳಿದ ಸಾವುಗಳಿವು

3. ಪಿವಿಆರ್–ಐನಾಕ್ಸ್ ವಿಲೀನ

ಮಲ್ಟಿಪ್ಲೆಕ್ಸ್ ಚೈನ್ ವ್ಯವಹಾರದಲ್ಲಿ ಪರಸ್ಪರ ಸ್ಪರ್ಧಿಗಳಾಗಿದ್ದ ಪಿವಿಆರ್ ಹಾಗೂ ಐನಾಕ್ಸ್ನ ವಿಲೀನ ಈ ವರ್ಷದ ಪ್ರಮುಖ ಉದ್ಯಮ ಖರೀದಿಗಳಲ್ಲಿ ಒಂದು. ಅಕ್ಟೋಬರ್ 11 ರಂದು ಪಿವಿಆರ್ ಅನ್ನು ಐನಾಕ್ಸ್ ಸ್ವಾಧೀನ ಪಡಿಸಿಕೊಂಡಿತು. ಆ ಮೂಲಕ ದೇಶದ 109 ನಗರಗಳಲ್ಲಿ 1,500ಕ್ಕೂ ಹೆಚ್ಚಿನ ಚಿತ್ರಪರದೆಗಳ ಜಾಲ ಹೊಂದಿರುವ ಅತಿದೊಡ್ಡ ಮಲ್ಟಿಪ್ಲೆಕ್ಸ್ ಸಮೂಹ ಜನ್ಮ ತಳೆಯಿತು. ವಿಲೀನ ಆದ ನಂತರದ ಕಂಪನಿಯನ್ನು ಪಿವಿಆರ್ ಐನಾಕ್ಸ್ ಲಿಮಿಡ್ ಎಂದು ಕರೆಯಲಾಗುತ್ತದೆ.

4. ಮಸ್ಕ್ ಪಂಜರ ಸೇರಿದ ನೀಲಿ ಹಕ್ಕಿ (ಟ್ವಿಟರ್)

ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣ ‘ಟ್ವಿಟರ್‘ ಅನ್ನು ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಅವರು ಖರೀದಿ ಮಾಡಿದರು. $ 44 ಬಿಲಿಯನ್ಗೆ ಈ ವಹಿವಾಟು ನಡೆಯಿತು. ಈ ಮೊದಲೇ ಟ್ವಿಟರ್ ಅನ್ನು ಖರೀದಿ ಮಾಡುವುದಾಗಿ ಘೋಷಣೆ ಮಾಡಿದ್ದ ಇಲಾನ್ ಮಸ್ಕ್, ಬಳಿಕ ಅದರಿಂದ ಹಿಂದೆ ಸರಿದಿದ್ದರು. ಅದಾದ ಬಳಿಕ ನಡೆದ ಕಾನೂನು ಪ್ರಕ್ರಿಯೆ, ತೊಡಕು, ಇನ್ನಿತರ ಸಮಸ್ಯೆಗಳು ಉಂಟಾಗಿ ಕೊನೆಗೂ ‘ನೀಲಿ ಹಕ್ಕಿ‘ ಮಸ್ಕ್ ಪಾಲಾಯ್ತು.

ಇದನ್ನೂ ಓದಿ:Year Ender 2022 | ಈ ವರ್ಷ ಕಣ್ಮರೆಯಾದ ಭಾರತೀಯ ಚಿತ್ರರಂಗದ 12 ತಾರೆಯರು

5. ಝೀ–ಸೋನಿ ವಿಲೀನ

ದೇಶದ ದೊಡ್ಡ ಮನರಂಜನಾ ಹಾಗೂ ಸುದ್ದಿ ಜಾಲ ಝೀ ನೆಟ್ವರ್ಕ್ ಸೋನಿ ಪಿಚ್ಚರ್ಸ್ ನೆಟ್ವರ್ಕ್ ಲಿಮಿಟೆಡ್ನೊಂದಿಗೆ ವಿಲೀನವಾಯ್ತು. ದೇಶದ ಮನೋರಂಜನಾ ಮಾರುಕಟ್ಟೆಯಲ್ಲಿ ನಡೆದ ದೊಡ್ಡ ವಿಲೀನಗಳಲ್ಲಿ ಇದೂ ಒಂದು. ಎರಡೂ ಸಂಸ್ಥೆಗಳು ವಲೀನವಾದ ಬಳಿಕ ಮಾರುಕಟ್ಟೆ ಮೌಲ್ಯ ₹ 50,000 ಕೋಟಿಯಷ್ಟಾಯಿತು.

6. ಜೊಮ್ಯಾಟೊ–ಬ್ಲಿಂಕಿಂಟ್ ವಿಲೀನ

ತ್ವರಿತ ದಿನಸಿ ಪೂರೈಕೆ ಮಾಡುತ್ತಿದ್ದ ಬ್ಲಿಂಕಿಂಟ್ (ಈ ಹಿಂದಿನ ಗ್ರೋಫರ್ಸ್) ಅನ್ನು ಫುಡ್ ಡೆಲಿವರಿ ಆ್ಯಪ್ ಜೊಮ್ಯಾಟೊ ಸ್ವಾಧೀನ ಪಡಿಸಿಕೊಂಡಿತು. ಬ್ಲಿಂಕಿಂಟ್ನ ಗೋದಾಮು ಮತ್ತು ಪೂರಕ ಸೇವೆಗಳ ವ್ಯವಹಾರ ಸೇರಿ ಸಂಪೂರ್ಣ ಕಂಪನಿಯನ್ನು ₹ 4,447 ಕೋಟಿಗೆ ಖರೀದಿ ಮಾಡಿತು. ಜೂನ್ನಲ್ಲಿ ಈ ವ್ಯವಹಾರ ಕುದುರಿತ್ತು.

ಇದನ್ನೂ ಓದಿ:Year Ender 2022 | ಮಹಿಳೆಯರ ಘನತೆ ಹೆಚ್ಚಿಸಿದ ‘ಸುಪ್ರೀಂ‘ನ 5 ತೀರ್ಪುಗಳಿವು

7. ಮೈಂಡ್ ಟ್ರಿ –ಎಲ್ಟಿಐ ವಿಲೀನ

ದೇಶದ ಪ್ರಮುಖ ಐಟಿ ಉದ್ಯಮಗಳಾದ ಎಲ್ ಆ್ಯಂಡ್ ಟಿ ಇನ್ಫೊಟೆಕ್ ಹಾಗೂ ಮೈಂಡ್ ಟ್ರಿ ಕಂಪನಿಗಳ ವಿಲೀನ ಈ ವರ್ಷ ನಡೆದ ಪ್ರಮುಖ ಉದ್ಯಮ ಸ್ವಾಧೀನಗಳಲ್ಲಿ ಒಂದು. ನವೆಂಬರ್ನಲ್ಲಿ ಈ ವಿಲೀನ ನಡೆದಿದ್ದು, ಸದ್ಯ ಎಲ್ಟಿಐ–ಮೈಂಡ್ ಟ್ರಿ ದೇಶದ ಐದನೇಅತೀ ದೊಡ್ಡ ಐಟಿ ಸೇವಾ ಪೂರೈಕೆದಾರ ಕಂಪನಿಯಾಗಿ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.