ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಫೋಲಿಯೊಗಳಲ್ಲಿ ಮಾತ್ರವೇ ಇರಿಸಿಕೊಳ್ಳಬೇಕು ಎಂಬ ಅನಿವಾರ್ಯ ಈಗ ಇಲ್ಲ. ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಡಿಮ್ಯಾಟ್ ಖಾತೆಗಳಲ್ಲಿ ಇರಿಸಿಕೊಳ್ಳುವ ಆಯ್ಕೆಯನ್ನು ಹೂಡಿಕೆದಾರರಿಗೆ ನೀಡಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಮ್ಯೂಚುವಲ್ ಫಂಡ್ ಕಂಪನಿಗಳಿಗೆ ವರ್ಷಗಳ ಹಿಂದೆಯೇ ಸೂಚಿಸಿದೆ.

ಅದಾದ ನಂತರದಲ್ಲಿ, ಹೂಡಿಕೆದಾರರು ಡಿಮ್ಯಾಟ್ ಖಾತೆಯ ಪ್ರಯೋಜನ ಬಳಸಿಕೊಳ್ಳಲು ಮುಂದಾಗುವುದು ಹೆಚ್ಚಾಗಿದೆ. ಆದರೆ, ಈಗಲೂ ಹಲವು ಹೂಡಿಕೆದಾರರು ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಫೊಲಿಯೊಗಳಲ್ಲಿ ಇರಿಸಿಕೊಂಡಿದ್ದಾರೆ. ತಮ್ಮ ಬಳಿ ಡಿಮ್ಯಾಟ್ ಖಾತೆ ಇದ್ದರೂ, ಅವರು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಫೊಲಿಯೊಗಳಲ್ಲಿ ಇರಿಸಿಕೊಂಡಿದ್ದಾರೆ. ಅವರಿಗೆ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಡಿಮ್ಯಾಟ್ ಖಾತೆಯಲ್ಲಿ ಇರಿಸಿಕೊಳ್ಳುವುದರ ಪ್ರಯೋಜನಗಳ ಬಗ್ಗೆ ಇನ್ನೂ ಅರಿವು ಸಿಕ್ಕಿರಲಿಕ್ಕಿಲ್ಲ. ಅಥವಾ, ಡಿಮ್ಯಾಟ್ ಖಾತೆಯಲ್ಲಿ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಇರಿಸಿಕೊಳ್ಳುವುದರ ಬಗ್ಗೆ ಅರಿವಿದ್ದರೂ, ಅವರು ತಮ್ಮ ಹೂಡಿಕೆಗಳು ಈಗಾಗಲೇ ಡಿಮ್ಯಾಟ್ ಖಾತೆಯಲ್ಲಿವೆ ಎಂದು ಭಾವಿಸಿರಬಹುದು.

ಹಣಕಾಸು ಜಗತ್ತು ಬಹಳ ವೇಗವಾಗಿ ಬದಲಾವಣೆ ಕಾಣುತ್ತಿದೆ. ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊ ನಿರ್ವಹಿಸುವ ಬಗೆಯನ್ನು ತಂತ್ರಜ್ಞಾನವು ಬಹಳ ಬದಲಾಯಿಸಿದೆ. ಹೂಡಿಕೆಯ ಪ್ರಕ್ರಿಯೆಯಲ್ಲಿ ಬಹಳಷ್ಟು ಸುಧಾರಣೆಗಳು ಆಗಿವೆ. ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಡಿಮ್ಯಾಟ್ ಖಾತೆಗೆ ಜೋಡಿಸುವುದು ಹಲವು ಪ್ರಯೋಜನಗಳನ್ನು ತಂದುಕೊಡಬಲ್ಲದು.

ಅದರ ಪ್ರಯೋಜನಗಳ ಬಗ್ಗೆ ಇಲ್ಲಿ ಒಂದಿಷ್ಟು ವಿವರಣೆ ಇದೆ:

1) ಯೂನಿಟ್‌ಗಳನ್ನು ಉಡುಗೊರೆಯಾಗಿ ವರ್ಗಾಯಿಸಬಹುದು: ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಡಿಮ್ಯಾಟ್ ಖಾತೆಯಲ್ಲಿ ಹೊಂದಿದ್ದರೆ, ಅವುಗಳನ್ನು ಮಾರುಕಟ್ಟೆಯ ಪರಿಧಿಯಿಂದಾಚೆಗೆ ವರ್ಗಾವಣೆ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಒಂದು ಡಿಮ್ಯಾಟ್ ಖಾತೆಯಿಂದ ಇನ್ನೊಂದು ಡಿಮ್ಯಾಟ್ ಖಾತೆಗೆ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ವರ್ಗಾವಣೆ ಮಾಡುವುದು ಸುಲಭ, ಸರಳ.

2) ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಅಡಮಾನವಾಗಿ ಬಳಸುವುದು ಸುಲಭ: ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಡಿಮ್ಯಾಟ್ ಖಾತೆಯಲ್ಲಿ ಇರಿಸಿಕೊಂಡಾಗ, ಅವುಗಳ ನಗದೀಕರಣದ ಅವಕಾಶಗಳು ಇನ್ನಷ್ಟು ಹೆಚ್ಚಾಗುತ್ತವೆ. ಆ ಯೂನಿಟ್‌ಗಳನ್ನು ಅಡಮಾನವಾಗಿ ಬಳಸಿಕೊಳ್ಳಬಹುದು. ಆ ಯೂನಿಟ್‌ಗಳನ್ನು ಅಡಮಾನವಾಗಿ ಇರಿಸಿ, ಸಾಲ ಪಡೆಯಬಹುದು. ಇದು, ಷೇರುಗಳು ಹಾಗೂ ಇತರ ಹಣಕಾಸಿನ ಉತ್ಪನ್ನಗಳನ್ನು ಅಡಮಾನವಾಗಿ ಪಡೆದು, ಸಾಲವನ್ನು ಪರಿಣಾಮವಾಗಿ ವಿತರಣೆ ಮಾಡುವ ಡಿಜಿಟಲ್ ಪ್ರಕ್ರಿಯೆಗೆ ಪೂರಕವಾಗಿ ಇದೆ. ಮ್ಯೂಚುವಲ್ ಫಂಡ್‌ಗಳನ್ನು ಅಡಮಾನವಾಗಿ ಬಳಸಿಕೊಳ್ಳುವ ಮೂಲಕ, ಹೂಡಿಕೆದಾರರು ತಮ್ಮ ಹಣಕಾಸಿನ ಅಗತ್ಯಗಳನ್ನು ಈಡೇರಿಸಿಕೊಳ್ಳಬಹುದು.

ಅಲ್ಲದೆ, ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಅಡಮಾನವಾಗಿ ಇರಿಸಿ, ಷೇರು ವಹಿವಾಟುಗಳಿಗೆ ಹಣ ಪಡೆದುಕೊಳ್ಳಬಹುದು ಕೂಡ.

3) ಆಸ್ತಿ ವರ್ಗಾವಣೆ ಸುಲಭ: ಮ್ಯೂಚುವಲ್ ಫಂಡ್‌ಗಳನ್ನು ಡಿಮ್ಯಾಟ್ ಖಾತೆಯಲ್ಲಿ ಇರಿಸಿಕೊಂಡಾಗ, ಅವುಗಳ ವರ್ಗಾವಣೆ, ವಾರಸುದಾರರಿಗೆ ಅವುಗಳ ಹಸ್ತಾಂತರ ಸುಲಭವಾಗುತ್ತದೆ. ಅಂದರೆ, ಹೂಡಿಕೆದಾರ ಮೃತಪಟ್ಟ ಸಂದರ್ಭದಲ್ಲಿ, ಆತನ ಡಿಮ್ಯಾಟ್ ಖಾತೆಯಲ್ಲಿನ ಎಲ್ಲ ಹೂಡಿಕೆಗಳನ್ನು ನಾಮನಿರ್ದೇಶನ ಸೌಲಭ್ಯವನ್ನು ಬಳಸಿಕೊಂಡು ಒಂದೇ ಪ್ರಕ್ರಿಯೆಯ ಮೂಲಕ ವರ್ಗಾವಣೆ ಮಾಡಬಹುದು.

4) ವಿವರ ಬದಲಾವಣೆ ಸುಲಭ: ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಡಿಮ್ಯಾಟ್ ಖಾತೆಯಲ್ಲಿ ಹೊಂದಿರುವುದರಲ್ಲಿ ಇನ್ನೊಂದು ಅನುಕೂಲ ಇದೆ. ಅದು, ಹೂಡಿಕೆದಾರನಿಗೆ ಸಂಬಂಧಿಸಿದ ವಿಳಾಸ, ಬ್ಯಾಂಕ್ ಖಾತೆ ವಿವರ, ಸಂಪರ್ಕ ವಿಳಾಸದಂತಹ ಯಾವುದೇ ವಿವರದಲ್ಲಿ ಬದಲಾವಣೆ ಆದ ಸಂದರ್ಭದಲ್ಲಿ ಅದನ್ನು ಡಿಮ್ಯಾಟ್ ಖಾತೆಯಲ್ಲಿ ತಿದ್ದುಪಡಿ ಮಾಡಿದರೆ ಸಾಕು; ಬೇರೆ ಬೇರೆ ಕಡೆಗಳಿಗೆ ತೆರಳಿ ತಿದ್ದುಪಡಿ ಮಾಡುವ ಅಗತ್ಯ ಇರುವುದಿಲ್ಲ.

5) ಹೆಚ್ಚುವರಿ ಕೆವೈಸಿ ಪ್ರಕ್ರಿಯೆಯ ಅಗತ್ಯ ಇಲ್ಲ: ಕೆವೈಸಿ ದಾಖಲೆಗಳನ್ನು ಸಲ್ಲಿಸುವುದು ಸಮಯ ಬೇಡುವ ಕೆಲಸ ಆಗಬಹುದು. ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಡಿಮ್ಯಾಟ್ ಖಾತೆಯಲ್ಲಿ ಇರಿಸಿದಾಗ, ಹೆಚ್ಚುವರಿ ಕೆವೈಸಿಯ ಅಗತ್ಯ ಇಲ್ಲವಾಗುತ್ತದೆ. ಏಕೆಂದರೆ ಡಿಮ್ಯಾಟ್ ಖಾತೆ ತೆರೆಯುವ ಸಂದರ್ಭದಲ್ಲಿಯೇ ಕೆವೈಸಿ ಪ್ರಕ್ರಿಯೆಯೂ ಪೂರ್ಣಗೊಂಡಿರುತ್ತದೆ. ಇದರಿಂದಾಗಿ ಹೂಡಿಕೆದಾರನ ಸಮಯ ಉಳಿತಾಯವಾಗುತ್ತದೆ.

ಲೇಖಕ ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ನ (ಎನ್‌ಎಸ್‌ಡಿಎಲ್) ಕಾರ್ಯನಿರ್ವಾಹಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.