ಪ್ಯಾನ್ ಕಾರ್ಡ್ ನಂಬರ್ ಹೇಳಿ ಎಂದು ದಿನನಿತ್ಯದ ಕೆಲ ವ್ಯವಹಾರಗಳಲ್ಲಿ ಕೇಳಿದಾಗ ಗಡಿಬಿಡಿಯಲ್ಲಿ ನಾವು ಆ ಸಂಖ್ಯೆಗಳನ್ನು ಫಟಾಫಟ್ ಎಂದು ಹೇಳುತ್ತೇವೆ. ಆದರೆ, ಪ್ಯಾನ್ ನಂಬರ್ ಅನ್ನು ಧಾವಂತದಲ್ಲಿ ಹೇಳುವಾಗ ತಪ್ಪಾದರೆ ಅದಕ್ಕೆ ನೀವು ತೆರಬೇಕಾದ ದಂಡ ಬರೋಬ್ಬರಿ ₹ 10 ಸಾವಿರ. ಹೌದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಅಡಿಯಲ್ಲಿ ಈ ರೀತಿಯ ನಿಯಮವಿದೆ. ಹೀಗಾಗಿ ಇನ್ನು ಮುಂದೆ ಯಾರಿಗಾದರು ಪ್ಯಾನ್ ನಂಬರ್ (ಶಾಶ್ವತ ಖಾತೆ ಸಂಖ್ಯೆ – PAN) ತಿಳಿಸುವಾಗ ಅಥವಾ ದಾಖಲೆಗಳಲ್ಲಿ ಬರೆಯುವಾಗ ಸಾಕಷ್ಟು ಎಚ್ಚರಿಕೆ ವಹಿಸಿ.

ಎಲ್ಲೆಲ್ಲಿ ಬಳಕೆ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಸೇರಿ ಒಟ್ಟು 20 ಉದ್ದೇಶಗಳಿಗೆ ಪ್ಯಾನ್ ನಂಬರ್ ನೀಡುವುದು ಕಡ್ಡಾಯ.

ಬ್ಯಾಂಕ್ ಖಾತೆ ಆರಂಭಿಸುವಾಗ, ವಾಹನಗಳನ್ನು ಕೊಳ್ಳುವಾಗ ಅಥವಾ ಮಾರಾಟ ಮಾಡುವಾಗ, ಮ್ಯೂಚುವಲ್ ಫಂಡ್, ಷೇರು, ಡಿಬೆಂಚರ್ , ಬಾಂಡ್‌ಗಳನ್ನು ಖರೀದಿಸುವಾಗ, ಗೃಹ ಸಾಲ ಪಡೆಯುವಾಗ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ, ₹ 50 ಸಾವಿರಕ್ಕಿಂತ ಹೆಚ್ಚು ನಗದು ಪಡೆಯುವಾಗ ಪ್ಯಾನ್ ನಂಬರ್ ನೀಡಬೇಕು.

ಈ ಮಾಹಿತಿ ಗೊತ್ತಿರಲಿ: ಪ್ಯಾನ್ ನಂಬರ್ ನಿಮಗೆ ಒಮ್ಮೆ ನಿಗದಿಪಡಿಸಿದ ಮೇಲೆ, ಅದಕ್ಕೆ ನೀವು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಪ್ಯಾನ್ ಕಾರ್ಡ್ ನಿಮ್ಮ ಜೀವಿತಾವಧಿಗೆ ಮಾನ್ಯವಾಗುತ್ತದೆ. ನಿಮ್ಮ ವಿಳಾಸ ಬದಲಾದರೂ ಪ್ಯಾನ್ ನಂಬರ್ ಮಾತ್ರ ಯಥಾಸ್ಥಿತಿಯಲ್ಲಿರುತ್ತದೆ.

ಸಾಮಾನ್ಯವಾಗಿ ಬ್ಯಾಂಕ್‌ಗಳು ಪ್ಯಾನ್ ನಂಬರ್‌ನ ಜೆರಾಕ್ಸ್ ಪ್ರತಿಗಳನ್ನು ಕೇಳುತ್ತವೆ. ಕೆಲವರು ಅದನ್ನು ನೀಡದೆ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಪ್ಯಾನ್ ನಂಬರ್ ನಮೂದಿಸುವಾಗ ಆಗುವ ಸಂಭಾವ್ಯ ಲೋಪವನ್ನು ತಡೆಯಲು ಪ್ಯಾನ್ ಕಾರ್ಡ್‌ನ ಜೆರಾಕ್ಸ್ ಪ್ರತಿ ನೀಡುವುದು ಉತ್ತಮ. ನೀವು ನಮೂದಿಸಿರುವ ಪ್ಯಾನ್ ನಂಬರ್‌ನಲ್ಲಿ ಏನಾದರೂ ಗೊಂದಲಗಳಿದ್ದಲ್ಲಿ ಜೆರಾಕ್ಸ್ ಪ್ರತಿಯಿಂದ ಬ್ಯಾಂಕ್‌ನವರು ಅದನ್ನು ಮರುಪರಿಶೀಲಿಸಬಹುದು. ನಿಮಗೆ ಪ್ಯಾನ್ ನಂಬರ್ ತಿಳಿದಿಲ್ಲ ಎಂದಾದಲ್ಲಿ, ನೀವು ಆಧಾರ್ ಸಂಖ್ಯೆ ನೀಡಬಹುದು. ಈಗ ಎರಡೂ ದಾಖಲೆಗಳು ಒಂದಕ್ಕೊಂದು ಜೋಡಣೆಯಾಗಿರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ನಿಮ್ಮ ಆಧಾರ್ ಸಂಖ್ಯೆ ತಪ್ಪಾಗಿ ನೀಡಿದರೂ ಸಹಿತ ನೀವು ₹ 10 ಸಾವಿರ ದಂಡ ತೆರಬೇಕಾಗುತ್ತದೆ. ಎಲ್ಲೆಲ್ಲಿ ಪ್ಯಾನ್ ಸಂಖ್ಯೆಯನ್ನು ಅಗತ್ಯವಾಗಿ ನಮೂದಿಸಬೇಕೋ ಅಲ್ಲಿ ನಮೂದಿಸದಿದ್ದರೆ ಅದಕ್ಕೂ ದಂಡ ಕಟ್ಟಬೇಕಾಗುತ್ತದೆ. ಒಂದೊಮ್ಮೆ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲ, ನಿಮ್ಮ ಆದಾಯವೂ ತೆರಿಗೆಗೆ ಒಳಪಡುವ ಮಿತಿಗಿಂತ ಕಡಿಮೆ ಇದೆ ಎಂದಾದಲ್ಲಿ ಫಾರಂ 60 ಭರ್ತಿ ಮಾಡುವುದು ಒಳಿತು.

ಎರಡು ಪ್ಯಾನ್ ಹೊಂದಿರುವುದು ಸರಿಯಲ್ಲ: ಒಂದೇ ಪ್ಯಾನ್ ನಂಬರ್ ಇರುವ ಐದಾರು ಕಾರ್ಡ್ ಪ್ರತಿಗಳನ್ನು ನೀವು ಹೊಂದಬಹುದು. ಆದರೆ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದುವಂತಿಲ್ಲ.

ಒಂದೊಮ್ಮೆ ನೀವು ಎರಡು ಪ್ರತ್ಯೇಕ ಸಂಖ್ಯೆಗಳಿರುವ ಪ್ಯಾನ್ ಕಾರ್ಡ್ ಹೊಂದಿದ್ದಲ್ಲಿ ಕೂಡಲೇ ಅದನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸುವುದು ಸೂಕ್ತ. ಯಾಕಂದ್ರೆ ಎರಡೆರಡು ಪ್ಯಾನ್ ಕಾರ್ಡ್ ಹೊಂದಿರುವುದು ಪತ್ತೆಯಾದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅನ್ವಯ ನೀವು ₹ 10 ಸಾವಿರ ದಂಡ ಪಾವತಿಸಬೇಕಾಗುತ್ತದೆ. ಆಧಾರ್ ಸಂಖ್ಯೆಗೆ ಜೋಡಣೆಯಾಗದ ಯಾವುದೇ ಪ್ಯಾನ್ ಕಾರ್ಡ್ ಡಿಸೆಂಬರ್ 31 ರ ನಂತರ ಅಮಾನ್ಯವಾಗಲಿದೆ.

ಪೇಟೆಯಲ್ಲಿ ನೀರಸ ವಾತಾವರಣ

ಸೂಚ್ಯಂಕಗಳ ಓಟಕ್ಕೆ ಮೂಡೀಸ್ ರೇಟಿಂಗ್ ಏಜೆನ್ಸಿ ಮೂಗುದಾರ ಹಾಕಿದ ನಂತರದಲ್ಲಿ, ಷೇರುಪೇಟೆ ನೀರಸ ಹಾದಿಯಲ್ಲೇ ಸಾಗಿದೆ. ಸಮಗ್ರ ಅರ್ಥಶಾಸ್ತ್ರದ ಅಂಕಿ –ಅಂಶಗಳಲ್ಲಿ ನಿರಾಶಾದಾಯಕ ಬೆಳವಣಿಗೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವುದೇ ಮಹತ್ತರ ಬೆಳವಣಿಗೆಗಳು ಆಗದ ಕಾರಣದಿಂದ ಪೇಟೆ ಮಂದಗತಿಯಲ್ಲಿ ಸಾಗುತ್ತಿದೆ.

ವಾರದ ಅವಧಿಯಲ್ಲಿ ಸೆನ್ಸೆಕ್ಸ್ 33.08 ಅಂಶಗಳ ಏರಿಕೆ ಕಂಡು 40,356 ರಲ್ಲಿ ವಹಿವಾಟು ಪೂರ್ಣಗೊಳಿಸಿದ್ದರೆ, ನಿಫ್ಟಿ 12.65 ಅಂಶಗಳ ಇಳಿಕೆ ಕಂಡು 11,895 ರಲ್ಲಿ ವಹಿವಾಟು ಕೊನೆಗೊಳಿಸಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 321.30 ಕೋಟಿ ಮೊತ್ತ ಮತ್ತು ದೇಶಿ ಹೂಡಿಕೆದಾರರು ₹ 514.61 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಲಯವಾರು: ವಲಯವಾರು ಪ್ರಗತಿಯಲ್ಲಿ ನಿಫ್ಟಿ ಹಣಕಾಸು ಶೇ 1.1 ರಷ್ಟು ಏರಿಕೆಯಾಗಿದೆ. ನಿಫ್ಟಿ ಬ್ಯಾಂಕ್ 0.84 ರಷ್ಟು ಜಿಗಿದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಲಯ ಶೇ 0.8 ರಷ್ಟು ಹೆಚ್ಚಳವಾಗಿದೆ. ನಿಫ್ಟಿ ಲೋಹ ವಲಯ ಶೇ 4.3, ಎಫ್‌ಎಂಸಿಜಿ ಶೇ 2, ರಿಯಲ್ ಎಸ್ಟೇಟ್ ಶೇ 1.5 ರಷ್ಟು ಕುಸಿದಿವೆ. ಮಾಧ್ಯಮ ವಲಯ ಶೇ 1.3 ರಷ್ಟು ತಗ್ಗಿದ್ದರೆ ಫಾರ್ಮಾ ಶೇ 0.8 ಮತ್ತು ಐಟಿ ವಲಯ ಶೇ 0.5 ರಷ್ಟು ತಗ್ಗಿದೆ.

ಗಳಿಕೆ- ಇಳಿಕೆ: ಭಾರ್ತಿ ಏರ್‌ಟೆಲ್, ಭಾರ್ತಿ ಇನ್ಫ್ರಾಟೆಲ್, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಷೇರುಗಳು ಶೇ 1.7 ರಿಂದ ಶೇ 6.5 ರಷ್ಟು ಗಳಿಸಿಕೊಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಬೆಳವಣಿಗೆ ಸ್ಥಿರವಾಗಿರಲಿದೆ ಎಂದು ಹೇಳಿದ ಪರಿಣಾಮ ಷೇರುಗಳು ಶೇ 1.7 ರಷ್ಟು ಜಿಗಿದಿವೆ.

ವೇದಾಂತ, ಹಿಂಡಾಲ್ಕೊ, ಯುಪಿಎಲ್, ಅದಾನಿ ಪೋರ್ಟ್ಸ್, ಇಂಡಸ್ ಇಂಡ್ ಬ್ಯಾಂಕ್ ಕಂಪನಿ ಷೇರುಗಳು ನಿಫ್ಟಿ (50) ಸೂಚ್ಯಂಕದಲ್ಲಿ ಶೇ 4 ರಿಂದ ಸೇ 12 ರಷ್ಟು ಕುಸಿದಿವೆ. ಕಳೆದ ತ್ರೈಮಾಸಿಕದಲ್ಲಿ ವೇದಾಂತದ ಲಾಭಾಂಶ ತಗ್ಗಿದ ಪರಿಣಾಮ ಷೇರುಗಳು ಶೇ 8.6 ರಷ್ಟು ಹಿನ್ನಡೆ ಅನುಭವಿಸಿವೆ. ಹಿಂಡಾಲ್ಕೊ ನಿವ್ವಳ ಲಾಭ ಕುಸಿದ ಪರಿಣಾಮ ಷೇರುಗಳು ಶೇ 8 ರಷ್ಟು ಕುಸಿತ ಕಂಡಿವೆ.

ಸೌದಿ ಆರಾಮ್ಕೊ ಐಪಿಒ: ಸೌದಿ ಅರೇಬಿಯಾದ ಅತಿ ದೊಡ್ಡ ತೈಲ ಕಂಪನಿ ಆರಾಮ್ಕೊ ಸಂಸ್ಥೆಯು ಷೇರು ಮಾರುಕಟ್ಟೆಗೆ ಲಗ್ಗೆಯಿಡುವುದು ಈಗ ಅಧಿಕೃತವಾಗಿದೆ.

ನವೆಂಬರ್ 17 ರಿಂದ ಆರಂಭಿಕ ಸಾರ್ವಜನಿಕ ಹೂಡಿಕೆಗೆ (ಐಪಿಒ) ಅವಕಾಶ ಕಲ್ಪಿಸಲಿದೆ. ವೈಯಕ್ತಿಕ ಹೂಡಿಕೆದಾರರಿಗೆ ನವೆಂಬರ್ 28 ರವರೆಗೆ ಐಪಿಒ ಖರೀದಿಗೆ ಅವಕಾಶ ಕಲ್ಪಿಲಾಗಿದೆ. ಷೇರುಗಳ ಮೊತ್ತ ಹಾಗೂ ಮೌಲ್ಯವನ್ನು ಡಿಸಂಬರ್ 5ರಂದು ನಿರ್ಧರಿಸುವುದಾಗಿ ಕಂಪನಿ ಹೇಳಿಕೊಂಡಿದೆ.

ಮುನ್ನೋಟ: ಸೆಪ್ಟೆಂಬರ್‌ನಲ್ಲಿ 3.38 ರಷ್ಟಿದ್ದ ಚಿಲ್ಲರೆ ಹಣದುಬ್ಬರ ಪ್ರಮಾಣ ಅಕ್ಟೋಬರ್‌ನಲ್ಲಿ 4.62 ಕ್ಕೆ ಏರಿಕೆಯಾಗಿದ್ದು 16 ತಿಂಗಳಲ್ಲೇ ಇದು ಗರಿಷ್ಠ ಹೆಚ್ಚಳವಾಗಿದೆ. ಕೈಗಾರಿಕೆ ಉತ್ಪಾದನೆ ಸೆಪ್ಟೆಂಬರ್‌ನಲ್ಲಿ 8 ವರ್ಷಗಳ ಕನಿಷ್ಠ ಮಟ್ಟಕ್ಕೆ ಅಂದರೆ 4.4 ಕ್ಕೆ ಇಳಿಕೆಯಾಗಿದೆ. ಟಾಟಾ ಮೋಟರ್ಸ್ ನಿಧಿ ಸಂಗ್ರಹ ವಿಚಾರವಾಗಿ ಈ ವಾರ ವಿಶೇಷ ಸಾಮಾನ್ಯ ಸಭೆ (ಇಜಿಎಂ) ನಡೆಸುತ್ತಿದೆ. ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ ಸಭೆಯ ಪ್ರಮುಖ ನಿರ್ಧಾರಗಳೂ ಹೊರಬೀಳಲಿವೆ. ಈ ಎಲ್ಲ ಬೆಳವಣಿಗೆಗಳು ಮಾರುಕಟ್ಟೆ ಸೂಚ್ಯಂಕದ ಮೇಲೆ ಪ್ರಭಾವ ಬೀರಲಿವೆ.

(ಲೇಖಕ, ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.