ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ: ‘ಹನುಮಂತ‌’ನ ಉದ್ಯೋಗ ಸೃಷ್ಟಿ

Last Updated 1 ಜನವರಿ 2022, 6:08 IST
ಅಕ್ಷರ ಗಾತ್ರ

ಟೀ ಪ್ರಿಯರಿಗೆ 200ಕ್ಕೂ ಹೆಚ್ಚು ವಿಧದ ಟೀ ರುಚಿ ನೀಡುವ ಉದ್ದೇಶಕ್ಕೆ ನವೋದ್ಯಮದ ರೂಪ ನೀಡಿರುವ ಹಾವೇರಿಯ ಯುವಕ ಜಿ.ಸಿ.ಹನುಮಂತ್ ಬೆಂಗಳೂರಿನಲ್ಲಿ ‘ಹಾಫ್‌ ಟೀ’ ಹೆಸರಿನ ಕೆಫೆ ಲೋಕ ಸೃಷ್ಟಿಸಿದ್ದಾರೆ. ಎಂಜಿನಿಯರ್‌ ಪದವೀಧರರಾದ ಹನುಮಂತ್, ತಂದೆ ನಡೆಸುತ್ತಿದ್ದ ಟೀ ಅಂಗಡಿಯನ್ನೇ ಪ್ರೇರಣೆಯಾಗಿಟ್ಟುಕೊಂಡು ಈ ನವೋದ್ಯಮ ಆರಂಭಿಸಿದರು.

ಸ್ನೇಹಿತರಾದ ಚಂದನ್ ಪಟೇಲ್ ಹಾಗೂ ಸುರೇಶ್‌ ಕುಮಾರ್‌ ಜತೆಗೂಡಿ ಬೆಂಗಳೂರಿನ ಮಲ್ಲೇಶ್ವರ, ಜಾಲಹಳ್ಳಿ ಕ್ರಾಸ್‌ ಹಾಗೂ ದಾವಣಗೆರೆಯಲ್ಲೂ ಕೆಫೆ ಆರಂಭಿಸಿದ್ದಾರೆ. ಇವರ ಹಾಫ್‌ ಟೀ ಕೆಫೆಯಿಂದ 10ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಕ್ಕಿದೆ. ಈಗ ‘ಹಾಫ್‌ ಟೀ ಸಾರಥಿ’ ಎನ್ನುವ ಸಂಚಾರಿ ಕೆಫೆಯನ್ನೂ ಆರಂಭಿಸಿದ್ದಾರೆ. ಸಂಚಾರಿ ಕೆಫೆಯಲ್ಲಿ 30ಕ್ಕೂ ಹೆಚ್ಚು ಸ್ವಾದದ ಟೀ ಲಭ್ಯ. ಹೆಚ್ಚು ಜನ ಸೇರುವ ಸ್ಥಳಕ್ಕೆ ತೆರಳಿ ಬಗೆ ಬಗೆಯಾದ ಟೀ ರುಚಿ ಉಣಬಡಿಸಲಾಗುತ್ತಿದೆ.

ಕನ್ನಡ ನೆಲೆಯಲ್ಲಿ ಅನ್ಯಭಾಷಿಕರು ಸುಲಭವಾಗಿ ನವೋದ್ಯಮಗಳಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆದರೆ, ಸ್ಥಳೀಯರಿಗೆ ಮಾರ್ಗದರ್ಶನದ ಕೊರತೆ ಇದೆ ಎಂಬುದನ್ನು ಮನಗಂಡು, ನವೋದ್ಯಮ ಆರಂಭಿಸುವಕನ್ನಡಿಗರಿಗೂ ದಾರಿ ತೋರುವ ‘ಕಥೆ ಹೊಡಿಬೇಡ ಗುರು’ ಎನ್ನುವ ಪುಸ್ತಕವನ್ನೂ ಹನುಮಂತ್ ಬರೆದಿದ್ದಾರೆ. ಇದರಲ್ಲಿ 22ಕ್ಕೂ ಹೆಚ್ಚು ಯಶಸ್ವಿ ನವೋದ್ಯಮಗಳನ್ನು ಉಲ್ಲೇಖಿಸಲಾಗಿದ್ದು,ಮತ್ತಷ್ಟು ಮಂದಿಗೆ ಉದ್ಯೋಗ ಸೃಷ್ಟಿಸುವ ಕನಸು ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT