5ಜಿ ತರಂಗಾಂತರ ಹರಾಜಿನಲ್ಲಿ ಅದಾನಿ ಗ್ರೂಪ್ ಪಾಲ್ಗೊಳ್ಳಲು ಮುಂದಾಗಿರುವುದು ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಸುದ್ದಿಯು ಭಾರ್ತಿ ಏರ್ಟೆಲ್ ಕಂಪನಿಯ ಷೇರಿನ ಮೌಲ್ಯ ಕುಸಿತಕ್ಕೆ ಕಾರಣವಾಯಿತು. ಒಂದು ವಾರದಲ್ಲೇ ಶೇ 6.23ರಷ್ಟು ಬೆಲೆ ಕುಸಿತವನ್ನುಕಾಣುವಂತಾಯಿತು...

5ಜಿ ತರಂಗಾಂತರ ಹರಾಜಿನಲ್ಲಿ ಗೌತಮ್ ಅದಾನಿ ನೇತೃತ್ವದ ಅದಾನಿ ಡೇಟಾ ನೆಟ್ವರ್ಕ್ಸ್ ಪಾಲ್ಗೊಳ್ಳಲು ಮುಂದಾಗಿರುವ ಸುದ್ದಿ ದೂರಸಂಪರ್ಕ (ಟೆಲಿಕಾಂ) ವಲಯದಲ್ಲಿ ಸಂಚಲನ ಮೂಡಿಸಿದೆ. 5ಜಿ ತರಂಗಾಂತರ ಹರಾಜಿನಲ್ಲಿ ಮುಖ್ಯ ಸ್ಪರ್ಧಿಗಳಲ್ಲಿ ಒಂದಾಗಿರುವ ಭಾರ್ತಿ ಏರ್ಟೆಲ್ ಕಂಪನಿಯ ಷೇರು, ಅದಾನಿ ಗ್ರೂಪ್ನ ‘ರಂಗಪ್ರವೇಶ’ದಿಂದಾಗಿ ಮಾರಾಟದ ಒತ್ತಡಕ್ಕೆ ಸಿಲುಕಿದೆ. ಕಳೆದ ಒಂದು ವಾರದಲ್ಲಿ ಭಾರ್ತಿ ಏರ್ಟೆಲ್ನ ಷೇರಿನ ಮೌಲ್ಯವು ಶೇ 6.23ರಷ್ಟು ಕುಸಿದಿದೆ.

5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಜುಲೈ 26ರಿಂದ ಆರಂಭಗೊಳ್ಳಲಿದೆ. ಈ ಪ್ರಕ್ರಿಯೆಯಲ್ಲಿ ದೂರಸಂಪರ್ಕ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ಜಿಯೊ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ಹೆಸರಷ್ಟೇ ಕೇಳಿಬರುತ್ತಿತ್ತು. ಇದೀಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಅದಾನಿ ಗ್ರೂಪ್ ಘೋಷಿಸಿದೆ. ಇದರಿಂದಾಗಿ 5ಜಿ ತರಂಗಾಂತರ ಖರೀದಿಸಲು ಎರ್ಟೆಲ್ಗೆ ಈಗ ರಿಲಯನ್ಸ್ ಜಿಯೊ ಜೊತೆಗೆ ಮತ್ತೊಬ್ಬ ಪ್ರಬಲ ಪ್ರತಿಸ್ಪರ್ಧಿಯನ್ನೂ ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

ಈ ನಕಾರಾತ್ಮಕ ಸುದ್ದಿ ಭಾರ್ತಿ ಏರ್ಟೆಲ್ನ ಹೂಡಿಕೆದಾರರನ್ನು ಚಿಂತೆಗೀಡು ಮಾಡಿದ ಪರಿಣಾಮ ವಾರದ ಆರಂಭದ ದಿನವಾದ ಜುಲೈ 11ರಿಂದಲೇ ಕಂಪನಿಯ ಷೇರು ಮಾರಾಟದ ಒತ್ತಡಕ್ಕೆ ಸಿಲುಕಿತು. ರಾಷ್ಟ್ರೀಯ ಷೇರುಪೇಟೆಯಲ್ಲಿ ಮೊದಲ ದಿನವೇ ಈ ಕಂಪನಿಯ ಷೇರಿನ ಮೌಲ್ಯವು ₹ 34.60ರಷ್ಟು (ಶೇ –4.97) ಕುಸಿಯಿತು. ಒಂದು ವಾರದ ವಹಿವಾಟಿನಲ್ಲಿ ಒಟ್ಟು ₹ 43.35ರಷ್ಟು (ಶೇ –6.23) ಮೌಲ್ಯವನ್ನು ಕಳೆದುಕೊಂಡಿದೆ.

‘ರಿಲಯನ್ಸ್ ಜಿಯೊ’ ಕಂಪನಿಯುಮುಖೇಶ್ ಅಂಬಾನಿ ನೇತೃತ್ವದ ‘ರಿಲಯನ್ಸ್ ಇಂಡಸ್ಟ್ರೀಸ್’ ಕಂಪನಿಯ ಭಾಗವಾಗಿದ್ದು, ಈ ಕಂಪನಿಯ ಷೇರಿನೊಂದಿಗೇ ಗುರುತಿಸಿಕೊಂಡಿದೆ. ‘ರಿಲಯನ್ಸ್ ಜಿಯೊ’ ಇನ್ನೂ ಪ್ರತ್ಯೇಕ ಷೇರು ಆಗದೇ ಇರುವುದರಿಂದ, 5ಜಿ ತರಂಗಾಂತರ ಹರಾಜಿನಲ್ಲಿ ಅದಾನಿ ಗ್ರೂಪ್ನ ‘ರಂಗಪ್ರವೇಶ’ದ ನೇರ ಪರಿಣಾಮವನ್ನು ಗುರುತಿಸಲು ಸಾಧ್ಯವಿಲ್ಲ. ಕಳೆದ ಒಂದು ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಷೇರು ಕೇವಲ ಶೇ 0.43ರಷ್ಟು ಏರಿಕೆ ಕಂಡಿದೆ. ಇನ್ನೊಂದು ಪ್ರಮುಖ ದೂರಸಂಪರ್ಕ ಕಂಪನಿಯಾದ ವೊಡಾಫೋನ್ ಐಡಿಯಾ ಷೇರಿನ ಮೌಲ್ಯವು ಈ ಅವಧಿಯಲ್ಲಿ ಶೇ 3.57ರಷ್ಟು ಹೆಚ್ಚಾಗಿರುವುದು ಗಮನಾರ್ಹ ಸಂಗತಿ. ಅದಾನಿ ಗ್ರೂಪ್ನ ಆಗಮನದ ಸುದ್ದಿ ಈ ಕಂಪನಿಯ ಮೇಲೆ ವಿಶೇಷ ಪರಿಣಾಮವನ್ನೇನೂ ಬೀರಿದಂತೆ ಕಾಣುತ್ತಿಲ್ಲ.

ಭಾರ್ತಿ ಏರ್ಟೆಲ್ ಕಂಪನಿಯ ಷೇರಿನ ಮೌಲ್ಯವು ಕಳೆದ ಒಂದು ತಿಂಗಳಲ್ಲಿ ಶೇ 4.44, ಮೂರು ತಿಂಗಳಲ್ಲಿ ಶೇ 12 ಹಾಗೂ ಆರು ತಿಂಗಳಲ್ಲಿ ಶೇ 9.55ರಷ್ಟು ಕುಸಿತ ಕಂಡಿದೆ. ಈ ಕಂಪನಿಯ ಷೇರು, ಒಂದು ವರ್ಷದ ಅವಧಿಯಲ್ಲಿ ಶೇ 26.37, ಎರಡು ವರ್ಷಗಳಲ್ಲಿ ಶೇ 17.82, ಮೂರು ವರ್ಷಗಳಲ್ಲಿ ಶೇ 89.40 ಹಾಗೂ ಐದು ವರ್ಷಗಳಲ್ಲಿ ಶೇ 77.69ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. 2021ರ ಜುಲೈ 20ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 517.82) ಕುಸಿದಿದ್ದ ಷೇರು, 2021ರ ನವೆಂಬರ್ 24ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹ 781.80) ತಲುಪಿತ್ತು.

ರಿಲಯನ್ಸ್ ದಾರಿಯಲ್ಲೇ ಅದಾನಿ?
5ಜಿ ತರಂಗಾಂತರಗಳನ್ನುಖಾಸಗಿ ನೆಟ್ವರ್ಕ್ಗಾಗಿ ಬಳಸಿಕೊಂಡು ವಿಮಾನ ನಿಲ್ದಾಣ, ಬಂದರು, ವಿದ್ಯುತ್ ಉತ್ಪಾದನೆ– ಸರಬರಾಜು ವಲಯದಲ್ಲಿ ಸೈಬರ್ ಸೆಕ್ಯೂರಿಟಿ ನೀಡಲು ಉದ್ದೇಶಿಸಿರುವುದಾಗಿ ಅದಾನಿ ಗ್ರೂಪ್ ಹೇಳಿಕೊಂಡಿದೆ. ಸದ್ಯಕ್ಕೆ ಡಾಟಾ ಸೇವೆಯನ್ನು ಮಾತ್ರ ನೀಡಲು ಬಯಸಿರುವ ಕಂಪನಿಯು ವೈಸ್ ಕಾಲ್ ಸೌಲಭ್ಯ ನೀಡುವ ಸಾರ್ವಜನಿಕ ದೂರಸಂಪರ್ಕ ಸೇವಾವಲಯಕ್ಕೆ ಬರುವ ಬಗ್ಗೆ ಯಾವುದೇ ಮುನ್ಸೂಚನೆಯನ್ನೂ ನೀಡಿಲ್ಲ. 2010ರಲ್ಲಿ ರಿಲಯನ್ಸ್ ಕಂಪನಿಯೂ ತರಂಗಾಂತರ ಖರೀದಿಸಿದಾಗ ವೈಸ್ ಕಾಲ್ ಸೇವೆಗೆ ಪರವಾನಗಿ ಪಡೆದಿರಲಿಲ್ಲ. ಆದರೆ, 2013ರಲ್ಲಿ ತರಂಗಾಂತರವನ್ನು ವೈಸ್ ಸೇವೆಗೂ ಬಳಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದುಕೊಂಡಿತು. ದೂರಸಂಪರ್ಕ ಸೇವೆಯಲ್ಲಿ ಇಂದು ‘ರಿಲಯನ್ಸ್ ಜಿಯೊ’ ಮಾರುಕಟ್ಟೆ ಪಾಲುಶೇ 40ರಷ್ಟು ಇದೆ. ಭಾರ್ತಿ ಏರ್ಟೆಲ್ ಕಂಪನಿಯು ಶೇ 36 ಹಾಗೂ ವೊಡಾಫೋನ್ ಐಡಿಯಾ ಕಂಪನಿಯು ಶೇ 19ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

5ಜಿ ತರಂಗಾಂತರವನ್ನುಅದಾನಿ ಗ್ರೂಪ್ ಖರೀದಿಸಿದರೆ ಮುಂಬರುವ ದಿನಗಳಲ್ಲಿ ವೈಸ್ ಸೇವೆಗೂ ಪರವಾನಗಿ ಪಡೆಯುವ ಮೂಲಕ ರಿಲಯನ್ಸ್ ಮಾದರಿಯಲ್ಲೇ ಹಿಂಬಾಗಿಲಿನ ಮೂಲಕ ದೂರಸಂಪರ್ಕ ಸೇವಾ ವಲಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಈ ನಕಾರಾತ್ಮಕ ಸುದ್ದಿಯ ತಕ್ಷಣದ ಪರಿಣಾಮ ಎಂಬಂತೆ ಭಾರ್ತಿ ಏರ್ಟೆಲ್ ಕಂಪನಿಯ ಷೇರಿನ ಮೌಲ್ಯ ಕುಸಿದಿದೆ.

ಏರ್ಟೆಲ್ ಕೈಹಿಡಿದ ‘ಗೂಗಲ್’
ಷೇರುಗಳ ಮಾರಾಟದ ಒತ್ತಡವನ್ನು ಎದುರಿಸುತ್ತಿದ್ದ ಸಂದರ್ಭದಲ್ಲೇ ಭಾರ್ತಿ ಏರ್ಟೆಲ್ ಕಂಪನಿಯ ಕೈಯನ್ನು ಅಮೆರಿಕ ಮೂಲದ ‘ಗೂಗಲ್’ ಕಂಪನಿ ಹಿಡಿದಿದೆ. ಗೂಗಲ್ ಇಂಟರ್ನ್ಯಾಷನಲ್ ಎಲ್ಎಲ್ಸಿ ಕಂಪನಿಗೆ ₹ 5 ಮುಖಬೆಲೆಯ 7.11 ಕೋಟಿ ಷೇರುಗಳನ್ನು ₹ 734ರ ಬೆಲೆಯಲ್ಲಿ (₹ 729 ಪ್ರೀಮಿಯಂ ಬೆಲೆಯೂ ಸೇರಿ) ಹಂಚಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಭಾರ್ತಿ ಏರ್ಟೆಲ್ ಕಂಪನಿಯು ಷೇರು ವಿನಿಮಯ ಕೇಂದ್ರಗಳಿಗೆ ನೀಡಿರುವ ಮಾಹಿತಿಯು ಹೂಡಿಕೆದಾರರಲ್ಲಿ ಚೈತನ್ಯವನ್ನು ತಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ವಾರಾಂತ್ಯದ ವಹಿವಾಟಿನ ದಿನವಾಗಿದ್ದ ಶುಕ್ರವಾರ ಏರ್ಟೆಲ್ ಷೇರಿನ ಖರೀದಿಗೆ ಜನ ಉತ್ಸಾಹ ತೋರಿದರು. ಅಂದು ಷೇರಿನ ಬೆಲೆಯು ₹ 10.15ರಷ್ಟು (ಶೇ 1.58) ಏರಿಕೆ ದಾಖಲಿಸಿರುವುದು ವಿಶೇಷವಾಗಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ)ದಲ್ಲಿ ಭಾರ್ತಿ ಏರ್ಟೆಲ್ ಕಂಪನಿಯ ಷೇರು ₹ 651.80ಕ್ಕೆ ವಾರಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.

7,11,76,839 ಷೇರುಗಳನ್ನು ಖರೀದಿಸುವುದರೊಂದಿಗೆ ಗೂಗಲ್ ಕಂಪನಿಯು, ಭಾರ್ತಿ ಏರ್ಟೆಲ್ ಕಂಪನಿ ಹಂಚಿಕೆ ಮಾಡಿರುವ ಒಟ್ಟು ಷೇರುಗಳ ಪೈಕಿ ಶೇ 1.28ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಗೂಗಲ್ ಕಂಪನಿಯು ಒಟ್ಟು ₹ 5,224 ಕೋಟಿ ಬಂಡವಾಳ ಹೂಡಿದಂತಾಗಿದೆ.

ಈ ಮೊದಲು ಗೂಗಲ್ ಕಂಪನಿಯು ಭಾರ್ತಿ ಏರ್ಟೆಲ್ನ ನೇರ ಪ್ರತಿಸ್ಪರ್ಧಿಯಾಗಿರುವ ರಿಲಯನ್ಸ್ ಜಿಯೊ ಕಂಪನಿಯಲ್ಲೂ ಶೇ 7.73ರಷ್ಟು ಬಂಡವಾಳ ತೊಡಗಿಸಿತ್ತು. ಇದೀಗ ಏರ್ಟೆಲ್ನಲ್ಲೂ ಗೂಗಲ್ ಬಂಡವಾಳ ತೊಡಗಿಸಿರುವುದು ಹೂಡಿಕೆದಾರರ ಗಮನ ಸೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.