ಬೆಂಗಳೂರು: ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಇದೇ ಮೊದಲ ಬಾರಿಗೆ 17,000 ಅಂಶಗಳ ಗಡಿ ದಾಟಿದೆ. ಮಂಗಳವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸಹ 57,000 ಅಂಶಗಳನ್ನು ಮೀರಿ ಮುಂದೆ ಸಾಗಿದೆ. ನಿನ್ನೆ ಷೇರುಪೇಟೆಯಲ್ಲಿ ದಾಖಲಾದ ಗೂಳಿಯ ಓಟವು ಇಂದು ಹೂಡಿಕೆದಾರರಲ್ಲಿ ಖರೀದಿಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.

ವಹಿವಾಟು ಮುಕ್ತಾಯಕ್ಕೂ ಮುನ್ನ ನಿಫ್ಟಿ 200.55 ಅಂಶ ಚೇತರಿಕೆಯೊಂದಿಗೆ 17,131.60 ಅಂಶ ತಲುಪಿದೆ. ಸೆನ್ಸೆಕ್ಸ್ 666 ಅಂಶ ಹೆಚ್ಚಳದೊಂದಿಗೆ 57,555 ಅಂಶಗಳನ್ನು ಮುಟ್ಟಿದೆ. ನಿಫ್ಟಿ 50 ಕಂಪನಿಗಳ ಸಾಲಿನಲ್ಲಿ ಭಾರ್ತಿ ಏರ್‌ಟೆಲ್ ಷೇರು 52 ವಾರಗಳ ಗರಿಷ್ಠ ಮಟ್ಟಕ್ಕೇರಿದೆ. ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಐಷರ್ ಮೋಟಾರ್ಸ್ ಹಾಗೂ ಹಿಂಡಾಲ್ಕೊ ಷೇರುಗಳ ಬೆಲೆ ಶೇ 4ರಷ್ಟು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆಯ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಇಂದು ಬೆಳಗ್ಗಿನ ವಹಿವಾಟಿನಲ್ಲಿ ₹ 2,48,34,296 ಕೋಟಿ ತಲುಪಿತು. ಆಗಸ್ಟ್‌ನಲ್ಲಿ ಸೆನ್ಸೆಕ್ಸ್ 4,000 ಅಂಶಗಳಷ್ಟು ಚೇತರಿಕೆಯೊಂದಿಗೆ 57,000 ಅಂಶಗಳನ್ನು ದಾಟಿದೆ. ಆಗಸ್ಟ್ 4ರಂದು ಸೆನ್ಸೆಕ್ಸ್ 54,000 ಅಂಶ ದಾಟಿತ್ತು. ಆಗಸ್ಟ್ 13ರಂದು 55,000 ಅಂಶಗಳು, ಆಗಸ್ಟ್ 27ರಂದು 56,000 ಅಂಶಗಳಿಗೂ ಹೆಚ್ಚಿನ ಮಟ್ಟದಲ್ಲಿ ವಹಿವಾಟು ಮುಕ್ತಾಯವಾಗಿತ್ತು.

ಇದನ್ನೂ ಓದಿ– ಬಂಡವಾಳ ಮಾರುಕಟ್ಟೆ | ಇಂಡೆಕ್ಸ್ ಫಂಡ್: ಹೂಡಿಕೆ ಸೂಕ್ತವೇ?

ನಿಫ್ಟಿ ಸೋಮವಾರ 226 ಅಂಶ ಹೆಚ್ಚಾಗಿ 16,931 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತ್ತು. ಸೆನ್ಸೆಕ್ಸ್ 765 ಅಂಶ ಜಿಗಿತ ಕಂಡು, ದಿನದ ಅಂತ್ಯಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 56,889 ಅಂಶಗಳಲ್ಲಿ ಕೊನೆಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.